ತೀರ್ಥಹಳ್ಳಿ : ತಾಲ್ಲೂಕಿನ ನಾಲೂರ್ ಸಮೀಪದ ರಸ್ತೆಯಲ್ಲಿ ಇಂದು ಕಾಡುಕೋಣ ರಸ್ತೆಗೆ ಹಾರಿದ ಪರಿಣಾಮವಾಗಿ ಒಂದು ಕಾರು ನಿಯಂತ್ರಣ ತಪ್ಪಿ ಜಖಂ ಆಗಿದೆ ಎಂದು ವರದಿಯಾಗಿದೆ.

ಕಾರಿನ ಮುಂಭಾಗ ಭಾಗಶಃ ಹಾನಿಯಾಗಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳು ರಸ್ತೆಯತ್ತ ಬರುವ ಘಟನೆಗಳು ಹೆಚ್ಚುತ್ತಿರುವ

ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ಕಾಡು ಪ್ರಾಣಿಗಳ ಸಂಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.