ಶಿವಮೊಗ್ಗ : ನಗರದ ಆದಿಚುಂಚನಗಿರಿ ಶಾಲಾ ಮುಂಭಾಗದಲ್ಲಿರುವ ಮೆಗ್ಗಾನ್ ಕ್ವಾಟ್ರಸ್ನ ಎಫ್-2 ಬ್ಲಾಕ್ನಲ್ಲಿ ತಾಯಿಯೊಬ್ಬಳು ತನ್ನ 12 ವರ್ಷದ ಪುತ್ರಿ ಪೂರ್ವಕಾಳನ್ನು ಹೊಡೆದು ಸಾಯಿಸಿ, ತಾನೂ ಕೂಡ ಫ್ಯಾನಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ದುರಂತ ಘಟನೆ ನಿನ್ನೆ ರಾತ್ರಿ ನಡೆದಿದೆ.

ನೇಣುಹಾಕಿಕೊಂಡು ಮೃತಪಟ್ಟ ಅವರನ್ನು ಶೃತಿ ಕೆ.ಎನ್. ಎಂದು ಗುರುತಿಸಲಾಗಿದ್ದು, ಈಕೆಯ ಪತಿ ರಾಮಣ್ಣ ಮೆಗ್ಗಾನ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ನಾಗಿ ಕೆಲಸ ಮಾಡುತ್ತಿದ್ದ ನಿನ್ನೆ ರಾತ್ರಿಪಾಳಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. ರಾತ್ರಿ 8.30ರ ಸುಮಾರು ಮಗಳು ಪೂರ್ವಿಕಾ ದೂರವಾಗಿ ಕರೆಮಾಡಿ, ಅಮ್ಮಾ ವಿಚಿತ್ರರೀತಿಯಲ್ಲಿ ಆಡುತ್ತಿದ್ದಾರೆ. ಮನೆಗೆ ಬರುವಂತೆ ತಿಳಿಸಿದ್ದಾಳೆ. ಆದರೆ ರಾಮಣ್ಣ ಇದು ದಿನನಿತ್ಯದ ಸಮಸ್ಯೆ ಆದ್ದರಿಂದ ಮರುದಿನ ಬೆಳಿಗ್ಗೆ ಬೇಗ ಬರುವುದಾಗಿ ಮಗಳಿಗೆ ತಿಳಿಸಿದ್ದಾರೆ. ಶೃತಿ ಇತ್ತೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು,

ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ಕರ್ತವ್ಯ ಮುಗಿಸಿ ಮನೆಗೆ ಬಂದ ರಾಮಣ್ಣ ಬಾಗಿಲು ಬಡಿದರೂ ತೆಗೆಯದೇ ಇದ್ದಾಗ ಕಿಟಿಕಿಯಿಂದ ನೋಡಿದಾಗ ಪತ್ನಿ ನೇಣುಹಾಕಿಕೊಂಡಿರುವುದು ಕಂಡು ಬಂದಿದೆ. ತಕ್ಷಣ ಅವರು ಡೋರ್ಲಾಕ್ ಒಡೆದು ಒಳಪ್ರವೇಶಿಸಿದಾಗ ಪತ್ನಿಯ ಶವದ ಕೆಳಗೆ ಮಗಳ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕಂಡು ಬಂದಿದ್ದು ಪತ್ನಿ ಮೊದಲು ಮಗಳನ್ನು ಕೊಲೆಮಾಡಿ, ನಂತರ
ನೇಣುಹಾಕಿದ್ದು ಕಂಡು ಬಂದಿದೆ. ದೊಡ್ಡಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.