ಶಿವಮೊಗ್ಗ, ಸೆ.29:
ಭದ್ರಾವತಿಯಲ್ಲಿ ಹಣದ ವಿಚಾರವಾಗಿ ಕಿರಿಕ್ ಮಾಡಿಕೊಂಡು ಹಳೇ ದ್ವೇಷದ ಹಿನ್ನೆಲೆಯಲ್ಲಿ ಓರ್ವ ವ್ಯಕ್ತಿಯನ್ನು ಕೊಲೆ ಮಾಡಿದ ಎಂಟು ಜನ ಅರೋಪಿಗಳಿಗೆ ಅಜೀವ ಸೆರೆವಾಸ ಶಿಕ್ಷೆಯನ್ನು ವಿಧಿಸಿ
ನ್ಯಾಯಾಲಯವು ತೀರ್ಪು ನೀಡಿದೆ

ಆಗಿನ ತನಿಖಾಧಿಕಾರಿಗಳಾದ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಕಾಂಡಿಕೆ
ಭದ್ರಾವತಿ ಹನುಮಂತನಗರದ ಶಾರುಖ್ ಖಾನ್ ಎಂಬ ವ್ಯಕ್ತಿ ಹಾಗೂ ಅದೇ ಏರಿಯಾದಲ್ಲಿ ವಾಸವಿದ್ದ ಹಂದಿ ರಮೇಶನ
ಮತ್ತಿತ್ತರಿಗೂ ಹಣದ ವಿಚಾರವಾಗಿ
ಕಿರಿಕ್ ನಡೆದಿದ್ದು.

ಸಿನಿಮಾ ರೀತಿಯಲ್ಲಿ ನಡೆಯುವ
ಸ್ಟೈಲ್ ನಲ್ಲಿ ಹಂದಿ ರಮೇಶ ಹಾಗೂ ಅತನ ಕಡೆಯವರು ಸೇರಿ
ಶಾರೂಕ್ ಖಾನ್ ನನ್ ಸಿಕ್ಕರೇ ಬಿಡುವುದಿಲ್ಲ ಸಾಯಿಸಿಬಿಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿದ್ದರು.
ನಂತರ ಬೆದರಿಕೆ ಹಾಕಿದ ಹಾಗೆಯೇ

ಶಾರುಖ್ ಖಾನ್, ನನ್ ಹಂದಿ ರಮೇಶ ಹಾಗೂ ಅತನ ಸ್ನೇಹಿತರು
ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿ ಮುಗಿಸಿದ್ದು
ಹಳೇ ದ್ವೇಷದ ಹಿನ್ನೆಲೆಯಲ್ಲಿ ನನ್ನ ಮಗನ ಕೊಲೆ ನಡೆದಿದೆ ಎಂದು ಪೋಲಿಸ್ ಠಾಣೆಗೆ ಭೇಟಿ ನೀಡಿ ಅರೋಪಿಗಳ ವಿರುದ್ದ ಸರಿಯಾದ ಕಾನೂನು ಕ್ರಮ ಜರುಗಿಸಿ ಎಂದು ಶಾರುಖ್ ಖಾನ್ ತಂದೆ ದೂರು ನೀಡಿದ ಮೇರೆಗೆ

ಅರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡ ಅಂದಿನ ಭದ್ರಾವತಿ ಹೊಸಮನೆ ಪೋಲಿಸ್ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಕಾಂಡಿಕೆ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
1.ರಮೇಶ @ ಹಂದಿ ರಮೇಶ 44 ವರ್ಷ, ಹೊಸಮನೆ ಭದ್ರಾವತಿ, 2.ವೆಂಕಟರಾಮ 35 ವರ್ಷ ಹನುಮಂತನಗರ ಭದ್ರಾವತಿ, 3. ಚಂದ್ರ 37 ವರ್ಷ, ಹನುಮಂತನಗರ ಭದ್ರಾವತಿ, 4. ಕಾರ್ತಿಕ 24 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 5. ಮಧುಸೂದನ್ 28 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 6. ರಮೇಶ 37 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 7. ನಾಗರಾಜ 25 ವರ್ಷ, ಹೊಸಮನೆ ಭದ್ರಾವತಿ, 8. ಸಿದ್ದಪ್ಪ 48 ವರ್ಷ ಸತ್ಯ ಸಾಯಿ ನಗರ ಭದ್ರಾವತಿ,ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರ ಶ್ರೀಮತಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಸೆ, 29, ರಂದು ಎಲ್ಲಾ 8 ಜನ ಆರೋಪಿಗಳಿಗೆ ಅಜೀವ ಸೆರೆವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.