
ಶಿವಮೊಗ್ಗ, ಸೆ.27:
27ರ ಇಂದಿನ ಶನಿವಾರ ಶಿವಮೊಗ್ಗ ಮಹಾನಗರ ಪಾಲಿಕೆಯ ದಸರಾ ಸಂಭ್ರಮದಲ್ಲಿ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿವೆ.
ಅತ್ಯಂತ ವಿಶೇಷವಾಗಿ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಪೌರಕಾರ್ಮಿಕರ ದಸರಾ ಕಾರ್ಯಕ್ರಮ ನಡೆಯಲಿದೆ. ಪತ್ರಕರ್ತ ಎನ್ ರವಿಕುಮಾರ್ ಉದ್ಘಾಟಿಸಿರುವ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಂಜೆ 6:00ಗೆ ಅಲ್ಲಮಪ್ರಭು ಮೈದಾನದಲ್ಲಿ ವಿಶೇಷ ಸಾಂಪ್ರದಾಯಕ ಮಿಶ್ರ ಸಂಗೀತ ಹಾಗೂ ವಿವಿಧ ಕಲೆಗಳ ಸಿಂಚನ ಕಾರ್ಯಕ್ರಮ ನಡೆಯುತ್ತಿದ್ದು, ವಿಶೇಷವಾಗಿ ಕು. ಕವನಾ ಹೆಗ್ಡೆ ಅವರಿಂದ ಕಥಕ್ ನೃತ್ಯ ನಡೆಯಲಿದೆ.

ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಕೆ.ಆರ್. ಸುಜಾತ ಉದ್ಘಾಟಿಸಿದ್ದಾರೆ. ಇದೇ ಜಿ.ಪಂ. ಉಪಕಾರ್ಯದರ್ಶಿ ಅನ್ನಪೂರ್ಣ ನಾಗಪ್ಪ ಮುದುಕಪ್ಪನವರ, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲದ ಜಂಟಿ ನಿರ್ದೇಶಕಿ ಗೀತಾ ಎನ್ ಯುರೇಶೀಮಿ, ಹಿರಿಯ ಸಹಾಯಕ ನಿರ್ದೇಶಕರು ವಾರ್ತಾ ಇಲಾಖೆ ಮಾರುತಿ ಆರ್, ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರೇಖ್ಯಾ ನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಜಿಲ್ಲಾ ಪಂಚಾಯತ್ ಶ್ರೀಕಾಂತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.




ವಿಶೇಷವಾಗಿ ಸಂಜೆ ಆರಕ್ಕೆ ಫ್ರೀಡಂ ಪಾರ್ಕ್ ನಲ್ಲಿ ವಿಶೇಷ ಹಾಗೂ ಸಾಂಪ್ರದಾಯಿಕ ಮಿಶ್ರ ಸಂಗೀತ ಕಾರ್ಯಕ್ರಮದಲ್ಲಿ ಸರಿಗಮಪ, ಎದೆ ತುಂಬಿ ಹಾಡುವೆನು ಖ್ಯಾತಿಯ ಮೈಸೂರ್ ಸುಮಂತ್ ವಸಿಷ್ಟ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮವಿರುತ್ತದೆ.
- ಇಂದು ಬೆಳಿಗ್ಗೆ 10:30ಕ್ಕೆ ಅಂಬೇಡ್ಕರ್ ಭವನದಲ್ಲಿ ಪೌರಕಾರ್ಮಿಕರಿಂದಲೇ ಅಭಿನಯಿಸಿದ ಜಲಗಾರ ನಾಟಕ ಪ್ರದರ್ಶನವಾಗಲಿದ್ದು, ನಂತರ ಡಾ. ದು ಸರಸ್ವತಿ ಮತ್ತು ತಂಡದವರಿಂದ ನಾಟಕ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ನೃತ್ಯ ಸಂಪ್ರದಾಯಿಕ ಉಡುಗೆ ಹಾಗೂ ಇದೇ ಪೌರಕಾರ್ಮಿಕರ ಸೂಪರ್ ಮಿನಿಟ್ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಿ. ಮಲ್ಲೇಶಪ್ಪ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್ಜಿ ಶ್ರೀನಿವಾಸ್ ಉಪಸ್ಥಿತರಿರುತ್ತಾರೆ.
ಅತ್ಯಂತ ವಿಶೇಷವಾಗಿ ನಡೆಯುತ್ತಿರುವ ಚಲನಚಿತ್ರ ಪ್ರದರ್ಶನದಲ್ಲಿ ಇಂದು ಬೆಳಗ್ಗೆ 9:30ಕ್ಕೆ ವೀರಭದ್ರೇಶ್ವರ ಚಿತ್ರಮಂದಿರಗಳಲ್ಲಿ ಗರುಡಗಮನ ವೃಷಭ ವಾಹನ ಚಲನಚಿತ್ರ ಪ್ರದರ್ಶನವಾಗಲಿದೆ. ಆರೋಗ್ಯ ನಮ್ಮ ಕೈಲಿ ಬೀದಿ ನಾಟಕವು ಇಂದು ಬೆಳಿಗ್ಗೆ ಎಂಟರಿಂದ ಶಿವಮೊಗ್ಗ ನಗರದ ನಾಲ್ಕು ಸ್ಥಳಗಳಲ್ಲಿ ನಡೆಯಲಿದ್ದು ಮೊದಲು ಹೊಳೆಬಸ್ ಸ್ಟಾಪ್, ಮೈತ್ರಿ ಕಾಲೇಜ್ ಆಫ್ ಎಜುಕೇಶನ್ ಆವರಣ, ಮೆಗಾನ್ ಆಸ್ಪತ್ರೆ ಹಾಗೂ ರಾಮಣ್ಣ ಶ್ರೇಷ್ಟಿ ಪಾರ್ಕ್ ನಲ್ಲಿ ಈ ನಾಟಕ ಪ್ರದರ್ಶನವಾಗಲಿದ್ದು ಮೈತ್ರಿ ಕಾಲೇಜಿನ ತಂಡ ಈ ನಾಟಕವನ್ನು ಪ್ರದರ್ಶಿಸಲಿದೆ. ಮಂಜು ರಂಗಾಯಣ ಅವರು ಈ ನಾಟಕವನ್ನು ರಚಿಸಿದ್ದು ನಿರ್ದೇಶನವನ್ನು ಸಹ ಮಾಡಿದ್ದಾರೆ.
ಏಸಂಜೆ 6:30 ರಿಂದ ಶರಾವತಿ ನಗರದ ಸುಗ್ಗಿ ಮನೆ ಅಂಗಳ ಚಂದ್ರ ಕಮಲದಲ್ಲಿ ಡಿ ಜೆ ನಾಗರತ್ನ ಮತ್ತು ತಂಡದಿಂದ ರಂಗಗೀತೆ ಗಾಯನ ಕಾರ್ಯಕ್ರಮ ನಡೆಯಲಿದ್ದು ಸಂಜೆ 7:30ರಿಂದ ಕುವೆಂಪುರಂಗಮಂದಿರದಲ್ಲಿ ಹಾಲಸ್ವಾಮಿ ನಿರ್ದೇಶನದ ನೇಟಿವ್ ಥಿಯೇಟರ್ ನ ವಿಶ್ವಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ? ಎಂಬ ಜೋಗಿ ರಚನೆಯ ನಾಟಕ ಪ್ರದರ್ಶನವಾಗಲಿದೆ.
ಮೈಸೂರು ದಸರಾವನ್ನು ಮೀರಿಸುವಂತಹ ಹತ್ತು ಹಲವು ಬಗೆಯ ಕಾರ್ಯಕ್ರಮಗಳು ನಿತ್ಯ ಶಿವಮೊಗ್ಗದ ದಸರಾದಲ್ಲೂ ನಡೆಯುತ್ತಿರುವುದು ವಿಶೇಷವೇ ಹೌದು. ಈ ಎಲ್ಲ ಕಾರ್ಯಕ್ರಮಗಳಿಗೆ ಶಿವಮೊಗ್ಗ ನಗರದ ಆಸಕ್ತ ನೋಡುಗರು ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರದ ಮಾಯಣ್ಣಗೌಡ ಅವರು ಹಾಗೂ ಸ್ವಾಗತ ಸಮಿತಿ ಕೋರಿದೆ.