ಶಿವಮೊಗ್ಗ : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ರವರ ಹುಟ್ಟುಹಬ್ಬವನ್ನು ಸೆ.೧೭ರಿಂದ ೨೧ರ ವರೆಗೆ ೫ ದಿನಗಳ ನಗರದ ವಿವಿಧ ಬಡಾವಣೆಗಳಲ್ಲಿ ಅನಾಥಾಶ್ರಮಗಳಲ್ಲಿ ಆಚರಿಸಲಾಗುವುದು ಎಂದು ಹೆಚ್.ಎಸ್. ಸುಂದರೇಶ್ ಅಭಿಮಾನಿಗಳ ಬಳಗ ತಿಳಿಸಿದೆ.

ಸೆ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ಸೂಡಾ ಕಛೇರಿ ಮುಂಭಾಗದಲ್ಲಿ ಅವರ ಹುಟ್ಟುಹಬ್ಬವನ್ನು ಕಾರ್ಯಕ್ರಮದ ಮೂಲಕ ಆಚರಿಸಲಾಗುವುದು. ಅಂದು ಬೆಳಿಗ್ಗೆ ೯ ಗಂಟೆಗೆ ದ್ರೌಪದಮ್ಮ ದೇವಸ್ಥಾನ, ೯.೩೦ಕ್ಕೆ ರವೀಂದ್ರನಗರ ಗಣಪತಿ, ೧೦ಕ್ಕೆ ಕೋಟೆ ಮಾರಿಕಾಂಬ, ೧೦-೪೫ಕ್ಕೆ ಪಂಚಮುಖಿ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೈಕ್ ರ್ಯಾಲಿಯ ಮೂಲಕ ಸೂಡಾ ಕಛೇರಿಗೆ ತಲುಪಿ ಅಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ ೨ಕ್ಕೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ನಂತರ ೪ ಗಂಟೆಯಿಂದ ರಾತ್ರಿ ೯ರ ವರೆಗೆ ವಿವಿಧ ಬಡಾವಣೆಗಳಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುವುದು.

ಸೆ.೧೮ರಂದು ಚಾರಿಟಬಲ್ ಟ್ರಸ್ಟ್, ಸೋಮಿನಕೊಪ್ಪ, ಶಾರದಾದೇವಿ ಅಂಧರ ಶಾಲೆ, ವೃದ್ಧಾಶ್ರಮ, ಹೊಸಮನೆ, ಮಲ್ನಾಡ್ ಆಸ್ಪತ್ರೆ, ಗುಂಡಪ್ಪಶೆಡ್ ಸೇರಿದಂತೆ ರಾತ್ರಿ ೯.೩೦ರ ವರೆಗೂ ಕಾರ್ಯಕ್ರಮಗಳು ನಡೆಯಲಿವೆ.

ಅದರಂತೆ ಸೆ.೧೯ ಮತ್ತು ೨೦ರಂದು ಕೂಡ ನಗರದ ವಿವಿಧ ಬಡಾವಣೆಗಳಲ್ಲಿ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನ್ನಸಂತರ್ಪಣೆ ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್.ಎಸ್. ಸುಂದರೇಶ್ ಅಭಿಮಾನಿಗಳು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ಕೋರಲಾಗಿದೆ.