ಶಿವಮೊಗ್ಗ, ಸೆ.15:
ಪ್ರಸಕ್ತ ಸೆ. 22 ರಿಂದ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಹಾಗೂ ಜಾತಿ ಸಮೀಕ್ಷೆಯಲ್ಲಿ ಮರಾಠ ಸಮುದಾಯವು 16, 17 ಹಾಗೂ 18ರ ಅಂಕಣದಲ್ಲಿ ಯಾವ ರೀತಿ ಭರ್ತಿ ಮಾಡಬೇಕು. ಈ ಸಮಾಜ 2ಎ ಗೆ ಹೋಗಲು ಯಾವ ನಿಲುವು ಕೈಗೊಳ್ಳಬೇಕು ಎಂಬುದರ ಬಗ್ಗೆ

ಮಹತ್ತರವಾದ ನಿರ್ಧಾರ ಕೈಗೊಳ್ಳಲು ಸೆಪ್ಟೆಂಬರ್ 16ರ ನಾಳೆ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗದ ಲಗನ ಕಲ್ಯಾಣ ಮಂದಿರದಲ್ಲಿ ಅಮೂಲ್ಯ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಮಾಜದ ಪ್ರಮುಖರು, ನಗರಸಭೆ ಮಾಜಿ ಅಧ್ಯಕ್ಷರೂ ಆದ ಎಲ್. ಸತ್ಯನಾರಾಯಣರಾವ್ ತಿಳಿಸಿದ್ದಾರೆ.

ರಾಜ್ಯಾದ್ಯಂತ ಹೊಸದಾಗಿ ನಡೆಸುತ್ತಿರುವ ಸಮೀಕ್ಷೆ ಬಗ್ಗೆ ರಾಜ್ಯಾದ್ಯಂತ ಸಮಾಜದವರು ಜಾತಿ ಗಣತಿ ಅರ್ಜಿ ನಮೂನೆ ಯಲ್ಲಿ ಕಾಲಂ 16,17,18, ರಲ್ಲಿ ನಾವುಗಳು ಏನು ನಮೂದಿಸಿದರೆ ಸರ್ಕಾರದ ಹೆಚ್ಚು ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂಬುದು ನಿರ್ಧಾರವಾಗಬೇಕಿದೆ. ನಾವುಗಳು 2ಎ ಗೆ ಹೋಗೋಕೆ ಯಾವ ನಿಲುವು ಕೈಗೊಳ್ಳಬೇಕೆಂದು ಬೆಂಗಳೂರು ನಗರದಲ್ಲಿ ಸಮಾಜದ ಹಿರಿಯರು ಮಾಜಿ ಸಚಿವರಾದ ಪಿ.ಜಿ.ಅರ್. ಸಿಂಧ್ಯಾ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು ಎಂದಿದ್ದಾರೆ.

ಈ ಸಭೆಯಲ್ಲಿ ಸಚಿವರಾದ ಸಂತೋಷ್ ಲಾಡ್, ಹಾನಗಲ್ ಶಾಸಕರಾದ ಶ್ರೀನಿವಾಸ್ ಮಾನೆ, ವಿಧಾನ ಪರಿಷತ್ ಸದಸ್ಯರಾದ ಎಂ ಜಿ. ಮೂಳೆ, ರಾಜ್ಯದ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಜಿಲ್ಲಾ ಮುಖಂಡರುಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಚರ್ಚಿಸಿ ಹಲವು ಮಹತ್ತರ ತೀರ್ಮಾನ ಕೈಗೊಳ್ಳಲಾಗಿದ್ದು ಅದನ್ನು ತಿಳಿಸಲು ಹಾನಗಲ್ ಶಾಸಕರಾದ ಶ್ರೀನಿವಾಸ್ ಮಾನೆಯವರು ಶಿವಮೊಗ್ಗಕ್ಕೆ ನಾಳೆ ಆಗಮಿಸಲಿದ್ದಾರೆಂದು ತಿಳಿಸಿದ್ದಾರೆ.

ನಾಳಿನ ಮಂಗಳವಾರ ಬೆಳಿಗ್ಗೆ 11 ಘಂಟೆಗೆ ಶಿವಮೊಗ್ಗದ ಲಗನಾ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಈ ಕರೆಯಲಾಗಿದೆ ಈ ಸಭೆಯಲ್ಲಿ ಭಾಗವಹಿಸಲು ಶಿವಮೊಗ್ಗ ಜಿಲ್ಲೆಯ ಸಮಾಜದ ಬಾಂಧವರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲು ಎಲ್. ಸತ್ಯನಾರಾಯಣರಾವ್ ಕೋರಿದ್ದಾರೆ.