ಶಿವಮೊಗ್ಗ, ಸೆ.14;
ದಿ. 15-09-2025 ರ ನಾಳೆ ಶಿವಮೊಗ್ಗ ನಗರದಲ್ಲಿ ನಡೆಯುವ ಈದ್ – ಮಿಲಾದ್ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 01 ಪೊಲೀಸ್ ಅಧೀಕ್ಷಕರು, 03 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 17 ಪೊಲೀಸ್ ಉಪಾಧೀಕ್ಷಕರು, 52 ಪೋಲಿಸ್ ನಿರೀಕ್ಷಕರು, 38 ಪೊಲೀಸ್ ಉಪ ನಿರೀಕ್ಷಕರು, 77 ಸಹಾಯಕ ಪೊಲೀಸ್ ನಿರೀಕ್ಷಕರು, 2000 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 1000 ಗೃಹರಕ್ಷಕ ದಳ ಸಿಬ್ಬಂದಿಗಳು, 01 RAF ತುಕಡಿ, 01 SAF ತುಕಡಿ 08 DAR ತುಕಡಿ, 01 QRT ತುಕಡಿ ಮತ್ತು 10 KSRP ತುಕಡಿಗಳನ್ನು ನಿಯೋಜಿಸಲಾಗಿದೆ.

ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರ ನೇತೃತ್ವದಲ್ಲಿ ಈ ದಿನ ದಿನಾಂಕಃ 14-09-2025 ರ ಇಂದು ಸಂಜೆ ಶಿವಮೊಗ್ಗ ನಗರದ ಜಿಲ್ಲಾ ಸಶಸ್ತ್ರ ಕವಾಯತು ಮೈದಾನದಲ್ಲಿ ಬ್ರೀಫಿಂಗ್ ಸಭೆ ನಡೆಸಿ, ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ನಂತರ ಮಿಥುನ್ ಕುಮಾರ್ ಜಿ.ಕೆ ಐಪಿಎ
ರಕ್ತದಾನ | ದೇಶದಲ್ಲೇ ಮಾದರಿಯಾದ ಶಿವಮೊಗ್ಗ ಪೊಲೀಸರು!, ಸಖತ್ ಸ್ಪೆಷಲ್ ಸುದ್ದಿ ನಿಮ್ ತುಂಗಾತರಂಗದಲ್ಲಿ ಮಾತ್ರ https://tungataranga.com/?p=45381
ಪೂರ್ತಿ ಸುದ್ದಿ ಓದಲು ಮೇಲಿನ ಲಿಂಕ್ ಕ್ಲಿಕ್ ಮಾಡಿ👆
ತುಂಗಾತರಂಗ ದಿನಪತ್ರಿಕೆ ಗುಂಪುಗಳಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ,
https://chat.whatsapp.com/DUwqFhLKcAOFi9VRTuO8H6?mode=ems_copy_c
ಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರ ನೇತೃತ್ವದಲ್ಲಿ, ಬಂದೋಬಸ್ತ್ ಗೆ ನೇಮಕವಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಸಶಸ್ತ್ರ ಪೊಲೀಸ್ ಬಲದ ತುಕಡಿಗಳು ಹಾಗೂ ಗೃಹರಕ್ಷಕ ಸಿಬ್ಬಂದಿಗಳ ತಂಡದೊಂದಿಗೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ಅನ್ನು ನಡೆಸಲಾಯಿತು.