ಶಿವಮೊಗ್ಗ : ಸರ್ಕಾರದ ಆದೇಶದಂತೆ ಆ.೨೧ರಿಂದ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ.೫೦ರಷ್ಟು ರಿಯಾಯಿತಿಯನ್ನು ನೀಡಿದ್ದು,

ನಾಳೆ (೧೨-೦೯-೨೦೨೫) ದಂಡ ಕಟ್ಟಲು ಕೊನೆಯ ದಿನಾಂಕವಾಗಿದ್ದು, ಸಾರ್ವಜನಿಕರು ಶೇ.೫೦ರಷ್ಟು ರಿಯಾಯಿತಿಯನ್ನು ಪಡೆದು, ದಂಡ ಪಾವತಿಸಬಹುದಾಗಿದೆ.

ಶಿವಮೊಗ್ಗ ನಗರ ಸಂಚಾರಿ ಪೊಲೀಸರು ಆ.೨೩ರಿಂದ ಸೆ.೧೦ರ ವರೆಗೆ ಒಟ್ಟು ೩೧,೨೫೫ ಇ-ಚಲನ್ ಪ್ರಕರಣಗಳಲ್ಲಿ ಒಟ್ಟು ೧,೨೮,೫೬,೫೦೦

ರೂ.ಗಳನ್ನು ದಂಡದ ಮೊತ್ತವಾಗಿ ಸ್ವೀಕರಿಸಿರುತ್ತಾರೆ. ಸಾರ್ವಜನಿಕರು ಕೊನೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಿವಮೊಗ್ಗ ನಗರ ಸಂಚಾರಿ ಪೊಲೀಸ್ ವತಿಯಿಂದ ಕೋರಲಾಗಿದೆ.