ಶಿವಮೊಗ್ಗ,ಆ.29 : ಪಾಲಿಕೆಯ ಅಶ್ರಯ ವಿಭಾಗದ ಸಮುದಾಯ ಸಂಘಟನಾ ಅಧಿಕಾರಿ 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಅಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪಿರ್ಯದುದಾರರಾದ ಮೊಹ್ಮದ್ ಆಸೀಫ್ ಉಲ್ಲಾ ತಂದೆ ಅಬ್ದುಲ್ ಮಜೀದ್ ಟೈಲ್ಸ್ ಕೆಲಸ ಇವರು ಬೊಮ್ಮನ ಕಟ್ಟೆಯಲ್ಲಿ ಅಮ್ಯಾದ್ ಅಲಿ ರವರಿಂದ ಮನೆಯನ್ನು ಖರೀದಿಸಿದ್ದು,

ಸದರಿ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡಲು ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಶಶಿಧರ್ ರವರನ್ನು ಭೇಟಿ ಯಾಗಿ ಮನೆಖಾತೆ ಮಾಡಿಕೊಡಲು ವಿಚಾರಿಸಿದಾಗ ಬೊಮ್ಮನಕಟ್ಟೆ ಅಶ್ರಯ ಬಡಾವಣೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿದ ಶಶಿಧರ್ ರವರು ಅ ವ್ಯಕ್ತಿಗೆ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ

ಅದರಂತೆ ಶಶಿಧರ್ ರವರು ವ್ಯಕ್ತಿಯಿಂದ 10 ಸಾವಿರ ರೂಪಾಯಿ ಲಂಚ ಸ್ವೀಕಾರಿಸುವಾಗ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಅಗಿ ಹಿಡಿದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ
ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರುದ್ರೇಶ್.ಕೆ.ಪಿ, ರವರು ಹಣ ಜಪ್ತಿ ಮಾಡಿ ಶಶಿಧರ್ ರವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ
ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನುಮಂಜುನಾಥ ಚೌಧರಿ.ಎಂ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಬಿ.ಪಿ. ಚಂದ್ರಶೇಖರ್. ಪೊಲೀಸ್ ಉಪಾಧೀಕ್ಷಕರು, ರವದ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರಾದ ರುದ್ರೇಶ್.ಕೆ.ಪಿ,ರವರು ಟ್ರ್ಯಾಪ್ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳಾದ ಗುರುರಾಜ ಎನ್ ಮೈಲಾರ್, ಶ್ರೀ.ವೀರಬಸಪ್ಪ ಎಲ್ ಕುಸಲಾಪುರ, ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ, ಮಂಜುನಾಥ.ಎಂ. ಸಿ.ಹೆಚ್.ಸಿ, ಶ್ರೀ. ಟೀಕಪ್ಪ ಸಿಹೆಚ್ಸಿ ಸುರೇಂದ್ರ ಹೆಚ್.ಜಿ. ಸಿ ಹೆಚ್ ಸಿ, ಪ್ರಶಾಂತ್ ಕುಮಾರ್ ಹೆಚ್. ಸಿ.ಪಿ.ಸಿ, ದೇವರಾಜ್.ವಿ. ಸಿಪಿಸಿ, .ಪ್ರಕಾಶ್ , ಅರುಣ್ ಕುಮಾರ್. ಚಂದ್ರಿ ಬಾಯಿ. ಪ್ರದೀಪ ಎ.ಹೆಚ್.ಸಿ, ಗಂಗಾಧರ ಎಪಿಸಿ, ಆನಂದ ಎ.ಪಿ.ಸಿ, ಗೋಪಿ ಎ.ಪಿ.ಸಿ ರವರು ಹಾಜರಿದ್ದರು