ಶಿವಮೊಗ್ಗ : ಇತ್ತೀಚೆಗೆ ರಾಜ್ಯದಲ್ಲಿ ಯೂರಿಯ ರಸಗೊಬ್ಬರ ಕೊರತೆ ಹಾಗೂ ಗೊಬ್ಬರ ವನ್ನು ದುಪ್ಪಾಟ್ಟು ಬೆಲೆಗೆ ಮಾರಾಟ ಮಾಡುತ್ತೀರುವ ದೂರುಗಳು ರೈತರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿ.ಎಸ್ ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ ಶಿವಮೊಗ್ಗ ನಗರ ಸೇರಿದಂತೆ ಆಯನೂರು ಹಾಗೂ ಇನ್ನಿತರೇ ಹಳ್ಳಿಗಳಲ್ಲಿ ಗೊಬ್ಬರ ಹಾಗೂ ಯೂರಿಯಾ ಮಾರಾಟ ಮಾಡುವ ಅಂಗಡಿ ಹಾಗೂ ಗೋಡಾನ್ ಗಳ ಮೇಲೆ ಧೀಡಿರ್ ದಾಳಿ ನಡೆಸಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರೀಶಿಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

ದಾಳಿಯ ವೇಳೆ ಯೂರಿಯಾ ಹಾಗೂ ಗೊಬ್ಬರ ಮಾರಾಟ ಮಾಡುವ ಅಂಗಡಿಗಳು ಹಾಗೂ ಗೋಡಾನ್ ಗಳಲ್ಲಿ ಯಾವುದೇ ತರಹದ ಕೊರತೆಗಳು ಕಂಡು ಬಂದಿಲ್ಲ ಎಂದು ವಿ.ಎಸ್ ರಾಜೀವ್ ರವರು ತಿಳಿಸಿದ್ದಾರೆ

ಹಾಗೂ ಗೊಬ್ಬರ ಅಗಲೀ ಹಾಗೂ ಯೂರಿಯಾ ಅಗಲೀ ಕೊಂಡು ಕೊಳ್ಳಲು ಬರುವ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಯಾಗದಂತೆ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ

ಅಂಗಡಿ ಹಾಗೂ ಗೋಡಾನ್ ಮಾಲೀಕರಿಗೆ ತಹಶೀಲ್ದಾರ್ ರಾಜೀವ್ ರವರ ಖಡಕ್ ಎಚ್ಚರಿಕೆ ನೀಡಿದ್ದಾರೆ

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು