ಶಿವಮೊಗ್ಗ : ಸಿಇಐಆರ್ ಪೋರ್ಟಲ್ ಬಳಸಿ ಕಳೆದು ಹೋದಮೊಬೈಲ್ ಫೋನ್ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಒಟ್ಟು ಪೋರ್ಟಲ್ಗಳಲ್ಲಿ ೧ ಸಾವಿರ ಮೊಬೈಲ್ ಕಳವು ಪ್ರಕರಣ ಪೋರ್ಟಲ್ನಲ್ಲಿ ದಾಖಲಾಗಿದ್ದು ಅದರಲ್ಲಿ ೧೧೦ ಮೊಬೈಲ್ಗಳನ್ನು ಇಲಾಖೆ ಹುಡುಕಿಕೊಡುವುದರಲ್ಲಿ ಯಶಸ್ವಿಯಾಗಿದೆ.

ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ, ಇವರ ಮಾರ್ಗದಲ್ಲಿ ಸೆನ್ ಠಾಣೆಯ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ, ಪಿಐ ಮಂಜುನಾಥ್ ಮತ್ತು ಸಿಬ್ಬಂದಿಗಳನ್ನ ಒಳಗೊಂಡ ತಂಡವನ್ನ ರಚಿಸಲಾಗಿತ್ತು.
ಕಳೆದ ಮೂರು ತಿಂಗಳಲ್ಲಿ ೧೬,೩೫,೦೦೦ ಒಟ್ಟು ೧೧೦ ಮೊಬೈಲ್ಗಳನ್ನು ಪತ್ತೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್

ಫೋನ್ಗಳು ಕಳೆದು ಹೋದರೆ ಠಾಣೆಗೆ ಭೇಟಿ ನೀಡದೆ ಸ್ವತಹ ತಾವೇ ಕೆಎಸ್ಪಿ ಅಪ್ಲಿಕೇಶನ್ನ ಈ ಲಾಸ್ಟ್ ಆಪ್ ಮೂಲಕ ದೂರು ದಾಖಲಿಸಿ ಸ್ವೀಕೃತಿಯನ್ನು ಪಡೆದು hಣಣಠಿs://ತಿತಿತಿ.ಛಿeiಡಿ.gov.iಟಿ ವೆಬ್ ಪೋರ್ಟಲ್ ಭೇಟಿ ನೀಡಿ bಟoಛಿಞ sಣoಟeಟಿ/ಐosಣ ಒobiಟe ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಫಾರಂನಲ್ಲಿ ಕಳೆದು ಹೋದ ಮೊಬೈಲ್ ಫೋನಿನ IಒಇI ನಂಬರ್ ಮೊಬೈಲ್ ನಂಬರ್ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವ ಮೂಲಕ ದೂರನ್ನು ದಾಖಲಿಸಬಹುದಾಗಿದೆ.

ದೂರು ದಾಖಲಾದ ೨೪ ಗಂಟೆಯ ಒಳಗಾಗಿ ಕಳೆದುಹೋದ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ ಇದರಿಂದಾಗಿ ನಿಮ್ಮ ಮೊಬೈಲ್ ಫೋನ್ ದುರ್ಬಳಕೆಯಾಗದಂತೆ ತಡೆಯಬಹುದಾಗಿದೆ ತಮ್ಮ ಮೊಬೈಲ್ ಫೋನನ್ನು ಯಾರಾದರೂ ಬಳಕೆ ಮಾಡಲು ಪ್ರಯತ್ನಿಸಿದ್ದಲ್ಲಿ
ಅವರ ವಿವರವೂ ದೊರಕುತ್ತದೆ ಇದರಿಂದ ಸುಲಭವಾಗಿ ತಮ್ಮ ಕಳೆದು ಹೋದ ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಲು ಸಾಧ್ಯವಾಗಿದೆ ಆದ್ದರಿಂದ ಎಲ್ಲಾ ಸಾರ್ವಜನಿಕರು ಫೋಟನ್ನ ಉಪಯೋಗವನ್ನು ಪಡೆದುಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.