ಶಿವಮೊಗ್ಗ : ಪತ್ರಕರ್ತ ಶಿ.ಜು. ಪಾಷಾರವರ ತಾಯಿ ಆಶಾಬೀ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತಿ, ನಾಲ್ಕು ಗಂಡು, ಎರಡು ಹೆಣ್ಣು ಹಾಗೂ ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಿಳ್ಳಘಟ್ಟದ ಮೂರನೇ ತಿರುವಿನಲ್ಲಿರುವ ಅವರ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾದರು. ಇಂದು ಸಂಜೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ. ಪ

ತ್ರಕರ್ತರು, ಗಣ್ಯರು ಮತ್ತು ಹಲವರು ಅವರ ನಿವಾಸಕ್ಕೆ ತೆರಳಿ ಮೃತರ ಅಂತಿಮ ದರ್ಶನ ಪಡೆದರು.

ಪತ್ರಕರ್ತರಾದ ಜಿ. ಪದ್ಮನಾಭ್, ಗಜೇಂದ್ರಸ್ವಾಮಿ, ಜಿ. ಚಂದ್ರಶೇಖರ್, ಆರುಂಡಿ ಶ್ರೀನಿವಾಸ್ಮೂರ್ತಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ