
ಶಿವಮೊಗ್ಗ ಜು.28: ಆಗಸ್ಟ್ 4 ರಿಂದ 6 ರವರೆಗೆ ಅಮೆರಿಕಾದ ಬೋಸ್ಟನ್ ನಲ್ಲಿ ನ್ಯಾಷನಲ್ ಕಾನಫೆರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇಟರ್ಸ್(ಓಅSಟ) ವತಿಯಿಂದ ನಡೆಯಲಿರುವ ಅಂತರರಾಷ್ಟ್ರೀಯ ಶಾಸಕ ಸಮ್ಮೇಳನದಲ್ಲಿ ಭಾಗವಹಿಸಲು

ವಿಧಾನಪರಿಷತ್ ಸದಸ್ಯರಾದ ಡಾ.ಮಂಜುನಾಥ್

ಭಂಡಾರಿ ಹಾಗೂ ಬಲ್ಕೀಶ್ ಬಾನು ಸೇರಿದಂತೆ ಕರ್ನಾಟಕದ ಹಲವು ಶಾಸಕರುಗಳು ಭಾಗವಹಿಸಲು ಇಂದು ಅಮೆರಿಕಕ್ಕೆ ತೆರಳಿದ್ದಾರೆ.

ಈ ಶೃಂಗಸಭೆಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವಿಕೆ ಶಾಸನ ಸಬೆಗಳ ಪಕ್ಷಾತೀತ ನಿರ್ವಹಣೆ ಸೇರಿದಂತೆ ಹಲವು
ವಿಷಯಗಳ ವಿಚಾರ ಸಂಕೀರ್ಣ ಸಂವಾದಗಳು ನಡೆಯಲಿದೆ. ಈ ಸಮಾವೇಶದಲ್ಲಿ ಕರ್ನಾಟಕದ ಎರಡು ಸದನಗಳ ಸಭಾಪತಿಗಳು, ಉಪಸಭಾಪತಿಗಳು, 20ಕ್ಕೂ ಅಧಿಕ ಶಾಸಕರುಗಳು ಭಾಗವಹಿಸುತ್ತಿದ್ದಾರೆ.