ಶಿವಮೊಗ್ಗ : ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ, ಜಲಜೀವನ್ ಯೋಜನೆಯಡಿ ನೀರು ಹರಿಸುವ ನೀರಾವರಿ ನಿಗಮದ ನಿರ್ಧಾರ ಅತ್ಯಂತ ಅವೈಜ್ಞಾನಿಕವಾಗಿದ್ದು, ತಕ್ಷಣವೇ ಇದನ್ನು ಸರಿಪಡಿಸಬೇಕು, ಹಾಗೆಯೇ ಎಡದಂಡೆ ಗೇಟ್ ಅಳವಡಿಸಬೇಕೆಂದು ರಾಜ್ಯ ರೈತ ಹಾಗೂ ಹಸಿರು ಸೇನೆ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಒತ್ತಾಯಿಸಿದ್ದಾರೆ.
ಅವರು ಇಂದು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಸಾಮಾನ್ಯವಾಗಿ ಭದ್ರ ಜಲಾಶಯವು ಜುಲೈ ಆರಂಭದ ಹೊತ್ತಿಗೆ ತುಂಬುತ್ತದೆ. ಈ ಬಾರಿ ಸ್ವಲ್ಪ ಬೇಗವೇ ಭರ್ತಿಯಾಗುವ ಹಂತಕ್ಕೆ ಬಂದಿದೆ. ಮುಂದಿನ ವಾರದೊಳಗೆ ಭರ್ತಿಯಾಗುವ ಆಶಾಭಾವನೆ ಇದೆ. ಈ ಜಲಾಶಯದಿಂದ ಪ್ರತಿ ವರ್ಷ ಜುಲೈ ೧೫ ರಿಂದ ನಾಲೆಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲಾಗುತ್ತದೆ. ಆದರೆ ಈಗ ನಾಲೆ ಸೀಳಿರುವುದು ನಾಲೆಯಲ್ಲಿ ನೀರು ಹರಿಸುವುದಕ್ಕೆ ತೀವ್ರ ತೊಂದರೆಯಾಗಲಿದೆ ಎಂದರು.

೭೧ ಅಡಿ ಟಿಎಂಸಿ ಸಂಗ್ರಹದ ಭದ್ರಾ ಜಲಾಶಯದ ಅಣೆಕಟ್ಟು ಸಾಮರ್ಥ್ಯದಲ್ಲಿ ಶೇ.೪೨ ನೀರು ಸಂಗ್ರಹವಿದೆ. ತಾಂತ್ರಿಕ ಮಟ್ಟದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಬಲದಂಡೆ ಯೋಜನೆಯಿಂದ ೧೬೦೦ ಕೋಟಿ ವೆಚ್ಚದಲ್ಲಿ ದಿನ ೩೦ ದಿನಗಳಲ್ಲಿ ವರ್ಷವಿಡಿ ಒಂದು ಟಿಎಂಸಿ ನೀರು ಕೊಡಲಾಗುತ್ತಿದೆ. ೮ ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಶುದ್ಧೀಕರಣದ ಘಟಕಕ್ಕೆ ಪೂರೈಸಲಾಗುತ್ತಿದೆ. ಅನುಷ್ಠಾನವನ್ನು ಪಂಚಾಯತ್ ರಾಜ್ ಇಲಾಖೆ ಎಂದು ಹೇಳಲಾಗುತ್ತಿದೆ. ನೀರು ಬಿಡಲು ಸಮಯ ಹತ್ತಿರವಾಗಿದೆ. ಅಚ್ಚುಕಟ್ಟು ಪ್ರದೇಶದಾರರಿಗೆ ವಾಲ್ ಕಟ್ಟಿ ಜಲಜೀವನ್ಮಿಷನ್ ಯೋಜನೆ ನಿರ್ಮಿಸಬೇಕಿತ್ತು. ಆ ಮುಂಜಾಗೃತ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಯುತ್ತಿದೆ ಎಂದಯ ಕಿಡಿಕಾರಿದರು.

ಜಲಾಶಯದಿಂದ ಪ್ರತಿ ವರ್ಷ ಜುಲೈ ೧೫ ರಿಂದ ನಾಲೆಗಳಿಗೆ ನೀರು ಬಿಡಲಾಗುತ್ತದೆ. ಒಂದುವೇಳೆ ಜುಲೈ ೧೫ರ ನಂತರ ಅಚ್ಚುಕಟ್ಟುದಾರರಿಗೆ ಜಲಾಶಯದಿಂದ ನೀರು ಬಿಡದಿದ್ದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೆ ಕಾರಣವಾಗಲಿದ್ದಾರೆಂದು ಎಚ್ಚರಸಿದ ಅವರು, ಅಚ್ಚುಕಟ್ಟು ಪ್ರದೇಶದ ರೈತರ ಮೂಲಕ ರಾಜ್ಯ ರೈತ ಸಂಘವು ಹೋರಾಟಕ್ಕೆಇಳಿಯಲಿದೆ. ದೇವನಹಳ್ಳಿ ರೀತಿಯಲ್ಲಿ ಪ್ರತಿಭಟನೆ ನಡೆಸುವ ಅನಿವಾರ್ಯ ಎದುರಾಗಿದೆ ಎಂದು ಗುಡುಗಿದರು.

ನಾಲೆ ಸೀಳಿರುವುದು ಅತ್ಯಂತ ಅವೈಜ್ಞಾನಿಕವಾದದ್ದು, ಈಗ ಜಲಜೀವನ್ ಮಿಷನ್ ಕೆಲಸ ನಿಂತಿದೆ. ತಾಂತ್ರಿಕ ವರದಿ ಬಂದ ನಂತರ ಕಾಮಗಾರಿ ಆರಂಭವಾಗಲಿದೆ. ಆದರೆ ಈ ಕಾಮಗಾರಿ ನಿಲ್ಲಿಸಿ, ಸೀಳಿರುವ ನಾಲೆಯನ್ನು ಭದ್ರಪಡಿಸಬೇಕು, ಹಾಗೆಯೇ ಎಡನಾಲೆ ಗೇಟ್ ಅನ್ನು ತಕ್ಷಣವೇ ದುರಸ್ಥಿಪಡಿಸಬೇಕು ನಾಲೆಯಿಂದ ನೀರು ಹರಿಸುವುದಕ್ಕಿಂತ ನದಿಯಿಂದ ನೀರು ಕೊಡಲಿ ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ. ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಸಿ.ಬಿ.ಹನುಮಂತಪ್ಪ, ರವಿ, ಮಂಜಪ್ಪ, ಸಿ. ಚಂದ್ರಪ್ಪ ಮತ್ತಿತರರು ಇದ್ದರು.