ಶಿವಮೊಗ್ಗ : ಜಿಲ್ಲಾ ಬಿಜೆಪಿ ಹಾಗೂ ಬಿಜೆಪಿ ಶಿವಮೊಗ್ಗ ನಗರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ೧೯೯೫ರ ತುರ್ತು ಪರಿಸ್ಥಿತಿ ನಾನು ತಿಳಿದಂತೆ ಕುರಿತು ಹಾಗೂ ಸಾರ್ವಜನಿಕರಿಗಾಗಿ ೧೯೯೫ರ ತುರ್ತು ಪರಿಸ್ಥಿತಿಯ ಹೇರಿಕೆ ಮತ್ತು ಪರಿಣಾಮಗಳು ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್ ಮಾತನಾಡಿ, ಭೂತಕಾಲದ ವಿಚಾರಗಳು ತಿಳಿದಾಗ ಮಾತ್ರ ವ್ಯಕ್ತಿ ಭವಿಷ್ಯ ನಿರ್ಮಿಸಲು ಸಾಧ್ಯ ಎಂದು ಹಿರಿಯರು ಹೇಳಿದ್ದಾರೆ. ೫೦ ವರ್ಷದ ಹಿಂದೆ ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ತನ್ನ

ಸರ್ವಾಧಿಕಾರಿ ಧೋರಣೆಯಿಂದ ತುರ್ತು ಪರಿಸ್ಥಿತಿ ಹೇರಿದಾಗ ಭಾರತ ಕಂಡ ಕರಾಳದಿನ ಹೇಗಿತ್ತು ? ಮತ್ತು ಜನ ಈ ಬಗ್ಗೆ ಎಷ್ಟು ತಿಳಿದಿದ್ದಾರೆ ಹಾಗೂ ಈಗಿನ ಪೀಳಿಗೆಗೆ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿಯೊಬ್ಬ ಸ್ಪರ್ಧಿಗೆ ಮೂರು ಪುಟ

ಬರೆಯಲು ಅವಕಾಶವಿದ್ದು, ಒಂದೂವರೆ ಗಂಟೆ ಕಾಲ ನಿಗಧಿಪಡಿಸಲಾಗಿದೆ. ಈಗಾಗಲೇ ಐವತ್ತಕ್ಕೂ ಹೆಚ್ಚು ನೋಂದಣಿಯಾಗಿದೆ ಎಂದರು.
ವೇದಿಕೆಯಲ್ಲಿ ಕಾರ್ಯಕ್ರಮದ ಸಂಚಾಲಕ ಜ್ಞಾನೇಶ್ವರ್, ಪ್ರಮುಖರಾದ ಜಯರಾಮ್, ಮಾಜಿ ಕಾರ್ಪೋರೇಟರ್ ವಿಶ್ವನಾಥ್, ಹಿರಿಯ ಪತ್ರಕರ್ತರಾದ ಅಜಯ ಶ್ರೀನಿವಾಸ್, ಕೃಷ್ಣಬನಾರಿ ಇದ್ದರು.