ನಗರದ ಗಾಂಧಿಬಜಾರ್ ನ ೮೮ ರ ಒರ್ವ ವೃದ್ದನಿಗೆ ಡಿಜಿಟಲ್ ಅರೆಸ್ಟ್ ಎಂಬ ನೆಪದಲ್ಲಿ ಖದೀಮರು ೧೭ ಲಕ್ಷ ರೂ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ

ವಾಟ್ಸ್ ಆಪ್ ಮೂಲಕ ವಿಡಿಯೋ ಕಡೆ ಮಾಡಿದ ಖದೀಮರು ಮುಂಬಾಯಿಯ ಕೋಲಾ ಪೋಲಿಸ್ ಠಾಣೆಯ ಅಧಿಕಾರಿಗಳು ಎಂದು ನಂಬಿಸಿ ವೃದ್ದನನ್ನು ಪರಿಚಯ ಮಾಡಿಕೊಂಡು ತದನಂತರ


ಒರ್ವ ವ್ಯಕ್ತಿಯ ಪೋಟೊವನ್ನು ಕಳುಹಿಸಿ
ಮನಿ ಲ್ಯಾಂಡ್ ಕೇಸಿನಲ್ಲಿ ಇವರು ಅರೆಸ್ಟ್ ಅಗಿದ್ದು ಇವರ ಅಕ್ರಮ ಹಣ ನಿಮ್ಮ ಖಾತೆಗೆ ಬಂದಿದೆ ಎಂದು ವೃದ್ದನನ್ನು ನಂಬಿಸಿ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಬ್ರರ್ ಕೈಂ ಡಿಜಿಟಲ್ ಅರೆಸ್ಟ್ನ ಬಗ್ಗೆ ಪೋಲಿಸರು ಜನರಿಗೆ ಎಷ್ಟೆ ಎಚ್ಚರಿಕೆ ನೀಡಿದರು ಕೆಲವರು ಮಾತ್ರ ಇಂತಹ ಪ್ರಕರಣದಿಂದ ಮೋಸ ಹೋಗುವುದಂತು ಇತ್ತೀಚೆಗೆ ಇದು ಸಹಜವಾಗಿದೆ.