night police car lights in city - close-up with selective focus and bokeh background blur
ಶಿವಮೊಗ್ಗ : ನಗರದಲ್ಲಿ ಓಸಿ ಹಾವಳಿ ಹೆಚ್ಚಾಗುತ್ತಿದ್ದರೂ ಪೋಲಿಸ್ ಇಲಾಖೆ ಎಂದಿನಂತೆ ಕಣ್ಣು ಮುಚ್ಚಿ ಕೊಂಡು ಕುಳಿತಿದೆ.

ಬಿಡ್ಡರ್ ಗಳು ಯಾವ ಭಯವೂ ಇಲ್ಲದೆ ಧಂದೆಯನ್ನು ಮುಂದುವರಿಸುತ್ತಿದ್ದಾರೆ.ನೂರಾರು ಬಾರಿ ಈ ಬಗ್ಗೆ ಸುದ್ದಿಯಾದರೂ ಕೂಡ ದಂದೆ ನಿಲ್ಲಿಸಲು ಆಗಿಲ್ಲ.

ಈಗ ಓಸಿ ದಂಧೆಗೆ ಹೊಸ ಹೊಸ ಸ್ಥಳಗಳು ಹುಟ್ಟಿ ಕೊಂಡಿವೆ.ಮುಖ್ಯ ವಾಗಿ ಸವಳಂಗ ರಸ್ತೆಯ ಹೊಸ ಸೇತುವೆ ಕೆಳಗೆ ಮತ್ತು ಆಸುಪಾಸುನಲ್ಲಿ, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿ ಸಾಕಷ್ಟು ಮಂದಿ ಬೆಳಗಿನಿಂದಲೆ ಓಸಿ ಚೀಟಿ ಬರೆಯುತ್ತಾ ತಿರುಗಾಡುತ್ತಿರುತ್ತಾರೆ. ಅಲ್ಲಿಯೇ ಸುಳಿದಾಡುವ ಪೋಲಿಸರಿಗೆಈ ವಿಷಯ ಗೊತ್ತಿಲ್ಲವೇ ಎಂಬುದು ಪ್ರಶ್ನೆ ? ಹಾಗೆಯೇ ನಗರದ ವಿನೋಬನಗರ, ಲಕ್ಷ್ಮಿ ಟಾಕೀಸ್, ನ್ಯೂ ಮಂಡಳಿ, ಗೋಪಾಲಗೌಡ ಬಡಾವಣೆ, ಟ್ಯಾಂಕ್ ಮೊಹಲ್ಲಾ, ವಿದ್ಯಾನಗರ, ಸೇರಿದಂತೆ ಹಲವು ಕಡೆ ಓಸಿ ಹಾವಳಿ ಹೆಚ್ಚಾಗಿದೆ.

ಇನ್ನು ಶಿವಮೊಗ್ಗದಲ್ಲಿ ಸಾಕಷ್ಟು ಅನಧಿಕೃತ ಕ್ಲಬ್ಗಳು ಇವೆ.ಇಸ್ಪೀಟು ಜೊತೆಗೆ ಓಸಿ ಕೂಡ ಇಲ್ಲಿ ಹೆಚ್ಚಾಗಿದೆ. ಹಳೆ ಓಸಿ ಬಿಡ್ಡರ್ ಜೊತೆಗೆ ಹೊಸ ಬಿಡ್ಡರ್ಗಳು ಹುಟ್ಟಿ ಕೊಂಡಿದ್ದಾರೆ. ಪೋಲಿಸರ ಕೃಪಾಕಟಾಕ್ಷ ಇವರ ಮೇಲಿದ್ದು ಎಗ್ಗಿಲ್ಲದೆ ಮುಂದುವರಿದಿದೆ. ಈ ಚಟಕ್ಕೆ ಹಲವು ಕುಟುಂಬಗಳೇ ನಾಶವಾಗಿವೆ. ಯುವ ಜನಾಂಗ ಓಸಿ ಜೊತೆಗೆ ಗಾಂಜಾ ದಂತಹ ದುಶ್ಚಟಕ್ಕೆ ಬಲಿಯಾಗಿದ್ದಾರೆ.

police ಇಲಾಖೆ ತಕ್ಷಣ ಕಾರ್ಯಪ್ರವೃತರಾಗಿ ಈ ದಂದೆ ನಿಲ್ಲಿಸಬೇಕಾಗಿದೆ.
****