ಶಿವಮೊಗ್ಗ, ಏ.06:
ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡ್ ನಂ1ರ ಸೋಮಿನಕೊಪ್ಪದಲ್ಲಿ ಎರಡು ದಿನಗಳಿಂದ ಕುಡಿಯುವ ನೀರಿಗೆ ಜನರ ಹಾಹಾಕಾರ ಉಂಟಾಗಿದೆ.
ಕಳೆದೆರಡು ದಿನದಿಂದ ನೀರು ಬಿಡದ ಹಿನ್ನೆಲೆಯಲ್ಲಿ ನೀರಿಗೆ ಕೊರತೆ ಉಂಟಾಗಿದೆ‌.
ಇಲ್ಲಿ ಪಾಲಿಕೆಯ ಸದಸ್ಸೆಯ ಪತಿ ಮಹಾಶಯನೇ ಗಾಡ್ ಫಾಧರ್…, ಕಾರ್ಪೂರೇಟರ್ ಆಶಾ ಮೇಡಂ ಮಾತಾಡೋದಿರಲಿ ವಾರ್ಡಿನ ಸಮಸ್ಸೆ ಬಗ್ಗೆ ಕೇಳೋದು ಹೇಳೋದೇನಿದ್ದರೂ ಪತಿದೇವರತ್ತ ಕೈ ತೋರಿ ಸುಮ್ಮನಾಗ್ತಾರೆ.


ಇಲ್ಲಿನ ಸದಸ್ಯರಾದ ಶ್ರೀಮತಿ ಆಶಾಚಂದ್ರಪ್ಪ ಅವರಿಗೆ ಯಾವಾಗಲಾದರೂ ದೂರವಾಣಿ ಮೂಲಕ ಕರೆಮಾಡಿದರೆ ಅವರ ಪತಿ ಚಂದ್ರಪ್ಪ ಕರೆಗಳನ್ನು ಸ್ವೀಕರಿಸುವುದು ವಾಡಿಕೆ. ಇವತ್ತು ಆಗಿದ್ದೂ ಅದೇ. ಸ್ವಯಂ ಘೋಷಿತ ಕಾರ್ಪೂರೇಟರ್ ಚಂದ್ರಪ್ಪ ಅವರು ಇಲ್ಲಿ ಮೋಟಾರ್ ಹಾಳಾಗಿದೆ ಏನ್ ಮಾಡೋಕಾಗುತ್ತೆ, ಸರಿ ಆಗುತ್ತೆ ಇವತ್ತು ಎಂಬ ಬೇಜಾಬ್ದಾರಿ ಹೇಳಿಕೆಗಳನ್ನು ನೀಡುತ್ತಾರೆ ಇಲ್ಲಿನ ಸಾರ್ವಜನಿಕರದ್ದಾಗಿದೆ.
ನಗರ ಪಾಲಿಕೆಯಲ್ಲಿ ನಡೆಯುವ ಪ್ರತಿ ಸಭೆಗಳಲ್ಲಿ ನಗರದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪರ ಮಾತಿಗೆ ಇಲ್ಲಿ ಬೆಲೆ ಇಲ್ಲದಂತೆ ಗೋಚರವಾಗುತ್ತಿದೆ. ನೀರಿಲ್ಲದೇ ಪರಿತಪಿಸುವ ಜನರಿಗೆ ನೀರುಸಿಗುವುದೇ..? ಜನ ಕೂಗಾಡಿದ ಮೇಲೆ ಟ್ಯಾಂಕರ್ ನಲ್ಲಿ ನೀರು ಬಂದಿದೆ.
ಇಡೀ ಸೋಮಿನಕೊಪ್ಪ, ಭೋವಿಕಾಲೋನಿ ಸ್ವಚ್ಚತೆ, ಕುಡಿಯುವ ನೀರು, ಬೀದಿದೀಪ… ಸಾಲು ಸಾಲು ಸಮಸ್ಸೆಗಳನ್ನು ಹೊತ್ತು ನಿಂತಿದೆ.

By admin

ನಿಮ್ಮದೊಂದು ಉತ್ತರ

error: Content is protected !!