ಪ್ರವಾಸೋದ್ಯಮ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಹೋಟೆಲ್ ಉದ್ಯಮದ ಕೊಡುಗೆ ಅಪಾರ ಎಂದು ರಾಜ್ಯಪಾಲ ಶ್ರೀ ಥಾ ವರ್ ಚಂದ್ ಗೆಹ್ಲೋಟ್ ನುಡಿದರು . ಅವರು ಕರ್ನಾಟಕ ಹೋಟೆಲ್ ಗಳ ಸಂಘ ಬೆಂಗಳೂರಿನ ಎಫ್ ಕೆ ಸಿ ಸಿ ಐ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ಎಪ್ಪತ್ತನೆಯ ವರ್ಷದ ಆಚರಣೆ ಹಾಗೂ ಆತಿಥ್ಯ ರತ್ನ ,ಉದ್ಯಮರತ್ನ ಪ್ರಶಸ್ತಿ ಪ್ರದಾನ ಸಮಾರಂಭ ವನ್ನು ಉದ್ಘಾಟಿಸಿ

ಮಾತನಾಡುತಿದ್ದರು.ಮೂವತ್ತು ಲಕ್ಷ ಜನರಿಗೆ ಉದ್ಯೋಗ ನೀಡುತ್ತಿರುವ ಉದ್ಯಮವನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಮತ್ತೋರ್ವ ಅತಿಥಿ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ನಮ್ಮ ಸಂಸ್ಕೃತಿ

ಆಚಾರ ವಿಚಾರ ಸ್ಥಳೀಯ ಆಹಾರ ಪದ್ದತಿಯನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಹೋಟೆಲ್ ಉದ್ಯಮ ವಹಿಸುತ್ತಿರುವ ಮಹತ್ತರ ಪಾತ್ರವನ್ನು ಹಾಗೂ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಉದ್ಯಮದ ಮಹತ್ವವನ್ನು ವಿವರಿಸಿ ಜನಪ್ರತಿನಿಧಿಗಳು ಉದ್ಯಮದ ಆಹ್ವಾಲುಗಳಿಗೆ ಸ್ಪಂದಿಸಬೇಕೆಂದು ನುಡಿದರು.

ಸಮಾರಂಭದಲ್ಲಿ ನಗರದ ಮಥುರಾ ಗ್ರೂಪ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎನ್ ಗೋಪಿನಾಥ್ ರವರಿಗೆ ಆತಿಥ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಶ್ರೀ ಜಿ ಕೆ ಶೆಟ್ಟಿ ಪ್ರಾಸ್ತಾವಿಕ ನುಡಿದರು. ಮಾಜಿ ಉಪಮುಖ್ಯಮಂತ್ರಿ ಶ್ರೀ ಅಶ್ವಥ್ ನಾರಾಯಣ, ಭಾರತೀಯ ಹೋಟೆಲ್ ಒಕ್ಕೂಟದ ಅಧ್ಯಕ್ಷ ಶ್ರೀ ಶಾಮರಾಜು , ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶ್ರೀ ಶಂಕರನಾರಾಯಣ ಹೊಳ್ಳ ಡಾ. ಬಿ. ವಿ . ಲಕ್ಷ್ಮಿದೇವಿ ಗೋಪಿನಾಥ್ ಮತ್ತು ಕರ್ನಾಟಕ ಹೋಟೆಲ್ ಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು