
ಶಿವಮೊಗ್ಗ : ಶಿವಮೊಗ್ಗದ ಪಾಸಿಟಿವ್ ಮೈಂಡ್ ಹಾಸ್ಪಿಟಲ್ ವಿನೋಬನಗರ ಹತ್ತಿರ ನೂತನವಾಗಿ ಆರಂಭಿಸಲಾಗಿರುವಚ ಜಸ್ ಶಿವಮೊಗ್ಗ ಮಾರ್ಟ್ ನ್ನು ಜಿ.ಪಂ.ಮಾಜಿ ಸದಸ್ಯ.ಕೆ.ಇ.ಕಾಂತೇಶ್ ಉದ್ಘಾಟಿಸಿದರು.

ಜಸ್ ಮಾರ್ಟ್ ಮಾಲೀಕರಾದ ಚಂದ್ರಶೇಖರ್ ಮಾತನಾಡಿ, ಅತ್ಯಂತ ಸುಸಜ್ಜಿತವಾದ ಕಟ್ಟಡದಲ್ಲಿ ,ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಸೇರಿದಂತೆ ಜೊತೆಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ಹಾಗೂ ವಿಶೇಷ ಆಫರ್ ಮೂಲಕ ತನ್ನ ಗ್ರಾಹಕರಿಗೆ ಶಿವಮೊಗ್ಗ ಜಸ್ ಮಾರ್ಟ್ ಆರಂಭಿಸಲಾಗಿದೆ. ನಗರದ ಜನತೆಗೆ ದಿನಸಿ ಸಾಮಾಗ್ರಿಗಳು ಸೇರಿದಂತೆ ಗೃಹ ಬಳಕೆಯ ಎಲ್ಲಾ ಸಾಮಾಗ್ರಿಗಳು ಒಂದೇ ಸೂರಿನಡಿ ಸಿಗಬೇಕೆನ್ನುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ನಾವು ಶಿವಮೊಗ್ಗದಲ್ಲಿ ಶಿವಮೊಗ್ಗ ಜಸ್ ಮಾರ್ಟ್ ಆರಂಭಿಸಿದ್ದೇವೆ. ಇದಕ್ಕೆ ಗ್ರಾಹಕರ ಪ್ರೋತ್ಸಾಹ ಬೇಕಿದೆ ಎಂದರು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್.ಗುರುಮೂರ್ತಿ, ಮಾಟ್೯ ಮಾಲೀಕರು ಸೇರಿದಂತೆ ಇತರರಿದ್ದರು.
ಏನಿಲ್ಲ ಸಿಗಲಿವೆ?
ಮನೆಗೆ ಬೇಕಾದ ಉತ್ತಮ ದಿನ ನಿತ್ಯದ ದಿನಸಿ ಸಾಮಾಗ್ರಿಗಳು, ಹಣ್ಣು, ಹಂಪಲು, ಡ್ರೈ ಪ್ರೂಟ್ಸ್ ,ತರಕಾರಿ, ಮಕ್ಕಳ ನೋಟ್ ಬುಕ್ ಸೇರಿದಂತೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದೊಂದಿಗೆ ಗೃಹ ಬಳಕೆಯ ಎಲ್ಲಾ ಸಾಮಾಗ್ರಿಗಳು ಲಭ್ಯವಾಗುವಂತೆ ಶಿವಮೊಗ್ಗ ಜಸ್ ಮಾರ್ಟ್ ತನ್ನ ಮೊದಲ ಶಾಖೆಯನ್ನು ಶಿವಮೊಗ್ಗ ಪಾಸಿಟಿವ್ ಮೈಂಡ್ ಹಾಸ್ಪಿಟಲ್ ಪಕ್ಕ ೬೦ ಅಡಿ ರಸ್ತೆ ವಿನೋಬನಗರದಲ್ಲಿ ಶಿವಮೊಗ್ಗ ಜಸ್ ಮಾರ್ಟ್ ಆರಂಭಿಸಿದೆ.