ರಾಕೇಶ್ ಶಿವಮೊಗ್ಗ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿರುವ ರಾಬರ್ಟ್ ಸಿನಿಮಾ ಸ್ಯಾಂಡಲ್ವುಡ್ ಅಷ್ಟೇ ಅಲ್ಲಾ ಟಾಲಿವುಡ್ ಕೂಡ ರಾಬರ್ಟ್ ಜಪ ಮಾಡ್ತಾ ಇತ್ತು. ಇದೀಗ ಆ ದೊಡ್ಡ ಕುತೂಹಲಕ್ಕೆ ತೆರೆಬಿದ್ದಿದೆ. ರಾಬರ್ಟ್ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದು, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಡಿ ಬಾಸ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಹೌದು. ಗುರುವಾರ (ಇಂದು) ಬಿಡುಗಡೆಗೊಂಡ ರಾಬರ್ಟ್ ಸಿನಿಮಾದ ಕಟೌಟ್ಗಳು, ಹಾಲಿನ ಅಭಿಷೇಕ. ಈ ರೀತಿ ಅದ್ದೂರಿಯಾಗಿ ರಾಬರ್ಟ್ ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತ ಮಾಡ್ಕೊಂಡಿದ್ದಾರೆ ಸಿನಿಪ್ರಿಯರು.
ಸಿನಿಮಾ ಹೇಗಿತ್ತು…?
ಚಿತ್ರದ ನಾಯಕ ರಾಘವ ವೃತ್ತಿಯಲ್ಲಿ ಅಡುಗೆ ಭಟ್ಟ. ಮೃದು ಸ್ವಭಾವದ ವ್ಯಕ್ತಿ. ಎಂತದ್ದೇ ಪರಿಸ್ಥಿತಿ ಬಂದರೂ ಸಹ ಯಾರ ಮೇಲೂ ಕೈ ಮಾಡದೇ ಅನುಸರಿಸಿಕೊಂಡು ಹೋಗುವ ವ್ಯಕ್ತಿ. ತಾನಾಯ್ತು ತನ್ನ ಮಗ ಆಯ್ತು ಅಂತ ಜೀವನ ಸಾಗಿಸುತ್ತಾ ಇರುತ್ತಾನೆ ಆದರೆ, ಈ ರಾಘವ ಯಾರು(?) ಆತನ ಬ್ಯಾಗ್ರೌಂಡ್ ಏನು(?) ಈ ರಾಘವ ಹಿಂದೆ ಏನಾಗಿದ್ದ(?) ರಾಬರ್ಟ್ ಯಾರು-ರಾಘವ ಯಾರು ಇದೆಲ್ಲದಕ್ಕೂ ಚಿತ್ರದ ಸೆಕೆಂಡ್ ಹಾಫ್ನಲ್ಲಿ ಉತ್ತರ ಸಿಗುತ್ತೆ.
ದರ್ಶನ್ ತಮ್ಮ ಪಾತ್ರಕ್ಕೆ 100 ಪರ್ಸೆಂಟ್ ಎಫರ್ಟ್ ಹಾಕಿರೋದು ತೆರೆಮೇಲೆ ಎದ್ದು ಕಾಣುತ್ತದೆ. ಅಭಿನಯದಲ್ಲಂತೂ ದಚ್ಚುಗೆ ದಚ್ಚುನೇ ಸರಿಸಾಟಿ ಎಂಬಂತೆ ನಟಿಸಿದ್ದಾರೆ. ಡಾನ್ಸ್, ಫೈಟ್ ಯಾವುದನ್ನು ತೆಗೆದುಹಾಕುವಂತಿಲ್ಲ. ಎಲ್ಲಾ ವಿಭಾಗದಲ್ಲೂ ದಚ್ಚು ಪರ್ಫೆಕ್ಟ್ ಅಂತ ಪ್ರೂವ್ ಮಾಡಿದ್ದಾರೆ.
ಚಿತ್ರದ ನಾಯಕಿ ಭದ್ರಾವತಿಯ ಆಶಾಭಟ್ ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಗಮನ ಸೆಳೆತಿದ್ದಾರೆ. ನಟನೆ, ಡಾನ್ಸ್ ಎರಡರಲ್ಲೂ ಸೂಪರ್ ಎನಿಸಿಕೊಂಡಿದ್ದಾರೆ.
ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ ಅಭಿನಯ ಅದ್ಭುತವಾಗಿದೆ. ಖಳನಾಯಕರಾದ ಜಗಪತಿ ಬಾಬು ನಾನಾ ಪಾತ್ರದಲ್ಲಿ,ಹಾಗೂ ರವಿಶಂಕರ್ ಸರ್ಕಾರ್ ಪಾತ್ರದಲ್ಲಿ ಎಂದಿನಿಂತೆ ಅದ್ಬುತ ನಟನೆ ಮಾಡಿದ್ದಾರೆ. ವಿನೋದ್ ಪ್ರಭಾಕರ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸೆಕೆಂಡ್ ಹಾಫ್ ಅದ್ಬುತ ಅನ್ನಿಸುತ್ತೆ.
ಒಟ್ಟಾರೆ ರಾಬರ್ಟ್ ಸಿನಿಮಾ ಡಿ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ ಅನ್ನುವುದರಲ್ಲಿ ಸಂಶಯವೇ ಇಲ್ಲ.