
ಶಿವಮೊಗ್ಗ, ಮಾ.07 : ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಶ್ರೀಗಂಧ ಸಭಾಂಗಣ ಬುಧವಾರ ಶಿವಮೊಗ್ಗದಲ್ಲಿ ಅರಣ್ಯ ಸಂಚಾರಿದಳದ ವತಿಯಿಂದ ಅರಣ್ಯ ಅಪರಾಧಗಳ ತಡೆಯುವಿಕೆ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಮತ್ತು ಭಿತ್ತಿಪತ್ರಗಳ ಬಿಡುಗಡೆ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ವಾಸವಿ ಪಬ್ಲಿಕ್ ಸ್ಕೂಲ್ ಶಿವಮೊಗ್ಗ ಶಾಲೆಯ ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹನುಮಂತಪ್ಪ ಕೆ.ಟಿ ಐ.ಎಫ್.ಎಸ್ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅರಣ್ಯ ಸಂಚಾರಿದಳ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ರು. ಅರಣ್ಯ ಅಪರಾಧಗಳ ತಡೆಯುವಿಕೆ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಸಂಚಾರಿದಳದ ಕಾರ್ಯ ಪ್ರಮುಖವಾದುದು ಎಂದರು. ಕಾರ್ಯಕ್ರಮ ಕುರಿತು ಅರಣ್ಯ

ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶೇಕ್ ಅಬ್ದುಲ್ ಅಲೀಂ ಸಿದ್ಧಿಕಿ ರವರು ಮಾತನಾಡಿ ಅರಣ್ಯ ಮತ್ತು ವನ್ಯಜೀವಿ ರಕ್ಷಣೆಯಲ್ಲಿ ಕೈ ಜೋಡಿಸುವಂತೆ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಕೇಳಿಕೊಂಡರು ಹಾಗೂ ಭಿತ್ತಿಪತ್ರದಲ್ಲಿ ತಿಳಿಸಿದ ಇಲಾಖಾ ಅಧಿಕಾರಿಗಳ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ದೂರು ನೀಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ

ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್ ಪಟಗಾರ್ ಐ.ಎಫ್.ಎಸ್ ಹಾಗೂ ರಾಜೇಂದ್ರ ಶಿಕ್ಷಕರು ವಾಸವಿ ಪಬ್ಲಿಕ್ ಸ್ಕೂಲ್, ಅರಣ್ಯ ಸಂಚಾರಿದಳದ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಆರ್.ಟಿ ಮತ್ತು ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಭಾಗ