ಶಿವಮೊಗ್ಗ, ಮಾ.04:
ಎಲೆಕ್ಟ್ರಾನಿಕ್ಸ್ ಮತ್ತು ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆಯಾದ ಯುನಿಲೆಟ್ 17 ನೇ ವರ್ಷದ ವಾರ್ಷಿಕ ಉತ್ಸವದ ಅಂಗವಾಗಿ ಶಿವಮೊಗ್ಗ ಬಿ.ಹೆಚ್.ರಸ್ತೆಯಲ್ಲಿರುವ ಯುನಿಲೆಟ್ ಮಳಿಗೆ ಸೇರಿದಂತೆ ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆಯಲ್ಲಿ ವಿಶೇಷ ಕೊಡು ಗೆಗಳ ಖಚಿತ ಉಡುಗೊರೆಗಳ ಹಬ್ಬವನ್ನು ನಾಳೆ ಯಿಂದ ಆಚರಿಸುತ್ತಿದೆ.
ಸಂಸ್ಥಾಪಕರ ದಿನದ ಅಂಗವಾಗಿ ಮಾರ್ಚ್ ತಿಂಗಳಲ್ಲಿ ಈ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆಯುವಂತೆ ಯುನಿಲೆಟ್ನ ಮುಖ್ಯ ವ್ಯವಸ್ಥಾಪಕರಾದ ಮುರುಳಿ ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
30ಸಾವಿರದವರೆಗಿನ ಖರೀದಿಗೆ ಹಾಗೂ 50ಸಾವಿರ ಖರೀದಿಗೆ ಮತ್ತು ಅದಕ್ಕೂ ಮೀರಿದ ಖರೀದಿಗೆ ಸಂಬಂಧಪಟ್ಟಂತೆ ಬೆಳ್ಳಿ, ಬಂಗಾರ ಹಾಗೂ ಡೈಮಂಡ್ನ ಕೂಪನ್ ಸ್ಕ್ರಾಚ್ ಮಾಡಿ ಖಚಿತ ಬಹುಮಾನವನ್ನು, ಉಡುಗೊರೆಯನ್ನು ಪಡೆಯಬಹುದಾಗಿದೆ ಎಂದರು.
ಶಿವಮೊಗ್ಗ ಮಳಿಗೆ ವ್ಯವಸ್ಥಾಪಕರಾದ ಚೆಲುವ ಕುಮಾರ್ ಹಾಗೂ ಅಜೇಯ್ ಅವರು ಮಾತನಾಡಿ, ಇದರಲ್ಲಿ ರೆಫಿಜರೇಟರ್ ವಾಷಿಂಗ್ ಮಿಷನ್, ಮಿಕ್ಸರ್ ಗ್ರೈಂಡರ್, ಎಲ್ಸಿಡಿ ಟಿವಿ, ಹೇರ್ ಕೂಲರ್, ಫ್ಯಾನ್, ಗ್ಯಾಸ್ ಸ್ಟವ್ನಿಂದ ಹಿಡಿದು ಬಹುತೇಕ ಉಡುಗೊರೆಗಳನ್ನು ಖಚಿತವಾಗಿ ಪಡೆಯಬಹುದಾಗಿರುತ್ತದೆ. ಶೂನ್ಯ ಬಡ್ಡಿದರದಲ್ಲಿ ಹಣಕಾಸಿನ ಸೇವೆಗಳು ದೊರೆಯುತ್ತವೆ ಎಂದು ಅವರು ಹೇಳಿದರು.


