
ಶಿವಮೊಗ್ಗ ಫೆ.21 : ಬಾಲ ಕಾರ್ಮಿಕ ಕಾಯ್ದೆಯನ್ವಯ ಶಿಕಾರಿಪುರ ತಾಲ್ಲೂಕಿನ ಎಸ್.ಎಸ್ ರಸ್ತೆಯಲ್ಲಿರುವ ಆಟೋಮೊಬೈಲ್ಗೆ ಫೆ.21 ರಂದು ಅನಿರೀಕ್ಷಿತ ದಾಳಿ ನಡೆಸಿದಾಗ ಓರ್ವ ಕಿಶೋರ ಕಾರ್ಮಿಕ ಪತ್ತೆಯಾಗಿರುತ್ತಾನೆ.
ಪ್ಯಾನ್ ಇಂಡಿಯಾ ರೆಸ್ಕುö್ಯ & ರಿಹ್ಯಾಬಿಲಿಟೇಷನ್ ಕ್ಯಾಂಪೇನ್ 2.0 ಪ್ರಯುಕ್ತ ರಾಷ್ಟಿçÃಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನವದೆಹಲಿ ಇವರು ಸೂಚಿಸಿದ ಮೇರೆಗೆ ದಿನಾಂಕ:21-02-2025ರAದು ಶಿಕಾರಿಪುರ ತಾಲ್ಲೂಕಿನಲ್ಲಿ ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ, ಇವರ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರಾಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ ಕಾಯ್ದೆ 2016ರನ್ವಯ ಶಿಕಾರಿಪುರ ತಾಲ್ಲೂಕಿನ ಎಸ್.ಎಸ್ ರಸ್ತೆಯಲ್ಲಿರುವ ಆಟೋಮೊಬೈಲ್ಗೆ ಅನಿರೀಕ್ಷಿತ ದಾಳಿ ನಡೆಸಿದಾಗ ಒಬ್ಬ ಕಿಶೋರ ಕಾರ್ಮಿಕನು ಪತ್ತೆಯಾಗಿರುತ್ತಾನೆ. ಸದರಿ ಕಿಶೋರಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸತಿಗೊಳಿಸಲು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಲಾಯಿತು.

ತಪಾಸಣೆ ವೇಳೆ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ನೇಮಿಸಿಕೊಂಡ ಮಾಲೀಕರ ವಿರುದ್ಧ ರೂ.20,000/- ರಿಂದ ರೂ.50,000/-ಗಳವರೆಗೆ ದಂಡವನ್ನು ಅಥವಾ 6 ತಿಂಗಳಿನಿAದ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಅರಿವು ಮೂಡಿಸಲಾಯಿತು.

ತಪಾಸಣೆಯಲ್ಲಿ ಶಿಕಾರಿಪುರದ ಕಾರ್ಮಿಕ ನಿರೀಕ್ಷಕ ಫಕೀರಪ್ಪ ಗೋಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಮೇಶ್ ಡಿ.ಆರ್, ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಶರತ್ ಹಾಗೂ ಮಕ್ಕಳ ಸಹಾಯವಾಣಿಯ ಅರ್ಪಿತ ಹಾಜರಿದ್ದರು.