ಬೆಂಗಳೂರು,ಮಾ.03:
ಸರ್ಕಾರಿ ಸಾರಿಗೆ ಬಸ್ ಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಬಸ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ಮತ್ತೆ ಪ್ರತಿಭಟನೆಗಿಳಿಯಲಿದ್ದಾರೆ.


ಹೌದು. ಈ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ನಗರದ ಮೌರ್ಯ ಸರ್ಕಲ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಮತ್ತೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ನಮ್ಮ ಬೇಡಿಕೆ ಮಾರ್ಚ್ 15 ರ ಒಳಗೆ ಈಡೇರದಿದ್ದರೆ ಸರ್ಕಾರಕ್ಕೆ ನಾವು ಯೂ ಟರ್ನ್ ಹೊಡೆತೀವಿ, ಮಾರ್ಚ್ 15 ರ ಬಳಿಕ ಬಸ್ ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.,


ಹೆಂಡತಿ ಮಕ್ಕಳ ಸಮೇತ ರಸ್ತೆಗೆ ಇಳಿದು ಹೋರಾಟ ಮಾಡುತ್ತೇವೆ, ಸಾರಿಗೆ ಸಚಿವರೇ , ಮುಖ್ಯಮಂತ್ರಿಗಳೇ ಈಗಲೂ ಕೂಡ ಸಮಯ ಇದೆ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!