ಶಿವಮೊಗ್ಗ ಜಿಲ್ಲಾ ಪೌರಸೇವಾ ನಿವೃತ್ತ ನೌಕರರ ಸಂಘ ಹಾಗೂ ಕೇಂದ್ರ ಸಂಘದ ಸಹಯೋಗದೊಂದಿಗೆ ಫೆ.23 ರ ಬೆಳಿಗ್ಗೆ 11 ಗಂಟೆಗೆ ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸ್ಕೌಟ್ ಭವನದಲ್ಲಿ 4 ನೇ ರಾಜ್ಯ ಮಟ್ಟದ ನಿವೃತ್ತ ಪೌರಸೇವಾ ನೌಕರರ ಮಹಾಸಭೆಯನ್ನು ಏರ್ಪಡಿಸಲಾಗಿದೆ.
ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸುವರು. ಕರ್ನಾಟಕ ರಾಜ್ಯ

ಮಹಾನಗರಪಾಲಿಕೆಗಳ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ವೀರಭದ್ರ ಸಿಂಪಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮಾಜಿ ವಿಧಾನ ಪರಿಷತ್ ಶಾಸಕ ಆರ್.ಕೆ.ಸಿದ್ದರಾಮಣ್ಣರವ ಗೌರವ ಉಪಸ್ಥಿತಿ ಇರಲಿದ್ದು ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ವಿಶೇಷ ಆಹ್ವಾನಿತರಾಗಿ ಆಗಮಿಸುವರು.

ಮುಖ್ಯ ಅತಿಥಿಗಳಾಗಿ ಮಹಾನಗರಪಾಲಿಕೆಯ ಮಾಜಿ ಮಹಾಪೌರರು ಎಸ್.ಕೆ.ಮರಿಯಪ್ಪ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಹೆಚ್.ಸಿ.ಯೋಗೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಕೆ.ಇ.ಕಾಂತೇಶ್ ಜಿಲ್ಲಾ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎನ್. ಗೋವಿಂದ, ,
ಉಪಮೇಯರ್ ಶಂಕರ್ ಗನ್ನಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಭಾಕರ, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪ್ರೇಮಾ ಚಂದ್ರಶೇಖರ್, ಮೇ.ಪ್ರೆöÊವೇಟ್ ಎಂಪ್ಲಾಯ್ಮೆAಟ್ ಬ್ಯೂರೋ ಮಾಲೀಕರಾದ ಸುರೇಶ್ ಬಾಳೆಗುಂಡಿ ಉಪಸ್ಥಿತರಿರುವರು.