ಶಿವಮೊಗ್ಗ, ಫೆ.19 ಪರಕೀಯರ ದಾಳಿಯನ್ನು ಹಿಮ್ಮೆಟ್ಟಿಸಿ ರಾಷ್ಟç ಕಟ್ಟಿದ
ಛತ್ರಪತಿ ಶಿವಾಜಿ ಮಹಾರಾಜರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಸೇರಿ ಜಯಂತಿಯನ್ನು ಆಚರಣೆ ಮಾಡೋಣ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಕರೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಕುವೆಂಪು ರಂಗಮAದಿರದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಕೀಯ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿ, ದೇಶದಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪಿಸಲು ಹೋರಾಡಿದ ದಾರ್ಶನಿಕರು ಶಿವಾಜಿ ಮಹಾರಾಜರು. ತಾಯಿ ಜೀಜಾಬಾಯಿಯವರು ಶೌರ್ಯದಿಂದ ಮಗನನ್ನು ಬೆಳೆಸಿದ ಪ್ರತಿಫಲವಾಗಿ ಅವರು ಹಿಂದೂ ರಾಷ್ಟ್ರ ಕಟ್ಟುವಲ್ಲಿ ಸಫಲರಾದರು.
ಶಿವಮೊಗ್ಗಕ್ಕೂ ಶಿವಾಜಿಯವರ ಕುಟುಂಬಕ್ಕೂ ಅವಿನಾಭಾವ ಸಂಬAಧ ಇದೆ. ಶಿವಾಜಿಯವರ ಮಕ್ಕಳು ಮೊಘಲರಿಂದ ತಪ್ಪಿಸುಕೊಳ್ಳುವಾಗ ಕೆಳದಿ ರಾಣಿ ಚೆನ್ನಮ್ಮ ಅವರನ್ನು ರಕ್ಷಿಸುವಲ್ಲಿ ಸಹಾಯ ಮಾಡಿದ್ದರು ಎಂದು ಸ್ಮರಿಸಿದರು.
ಮೊಘಲರು ಸೇರಿದಂತೆ ಇತರೆ ಆಕ್ರಮಣಕಾರರ ವಿರುದ್ದ ಹೊರಾಡಿದ್ದ ಶಿವಾಜಿ ಹಾಗೂ ವಂಶಸ್ಥರನ್ನು ನಾವು ಸ್ಮರಿಸಬೇಕು ಎಂದ ಅವರು ಪ್ರಸ್ತುತ ಪ್ರಯಾಗರಾಜ್ಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಹ ಶಿವಾಜಿ ಮಹಾರಾಜರ ಕೊಡುಗೆ ಇದೆ ಎಂದರು.
ಯುವ ವಾಗ್ಮಿ ಕುಮಾರಿ ಹಾರಿಕ ಮಂಜುನಾಥ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ದೇಶದ ಗುಡಿ ಗೋಪುರಗಳನ್ನು ಉಳಿಸಿದ ಶಿವಾಜಿ ಮಹಾರಾಜರು ದೇವರ ಸಮಾನರು. ನಮ್ಮ ಸನಾತನ ಧರ್ಮವನ್ನು ನಾಶಗೊಳಿಸಲು ಪ್ರಯತ್ನಿಸಿದವರ ವಿರುದ್ದ ನಿಂತು ರಾಷ್ಟç ರಕ್ಷಣೆಯಲ್ಲಿ ತೊಡಗಿದ್ದ ಶೌರ್ಯವಂತರು.
ಹಿಂದು ಧರ್ಮ ಪಾಲನೆಗೆ ಅಡೆತಡೆಗಳಿದ್ದವು ಹಾಗೂ ನಮ್ಮ ಸನಾತನ ಧರ್ಮಕ್ಕೆ ನಿರಂತರವಾಗಿ ಒಂದು ಸಾವಿರ ವರ್ಷಗಳ ದಾಳಿ ನಡೆದರೂ ಶಿವಾಜಿಯಂತಹ ಹೋರಾಟಗಾರರಿಂದ ಧರ್ಮ ರಕ್ಷಣೆಯಾಗಿದೆ. ಜಾಗತಿಕ ಮಟ್ಟದಲ್ಲಿ ಅನೇಕ ಪ್ರಾಚೀನ ಮತ, ಪಂಥಗಳು ಕಣ್ಮರೆಯಾಗಿರುವುದನ್ನು ಕಾಣಬಹುದಾಗಿದೆ. ಆದರೆ ಶಿವಾಜಿಯಂತಹವರು ಪರಕೀಯ ದೇಶಗಳ ಸರಣಿ ದಾಳಿಯಿಂದ ರಾಷ್ಟç ರಕ್ಷಣೆ ಮಾಡಿದ್ದಾರೆ.

ಧರ್ಮ ರಕ್ಷಣೆಗಾಗಿಯೇ ಎಂಬAತೆ ಚಿಕ್ಕಂದಿನಿAದಲೇ ಹೋರಾಟ ಮಾಡುತ್ತಾ ಬಂದ ಶಿವಾಜಿ ಮಹಾರಾಜರು, ಸಂಘಟಿತ ಬಲ ನೀಡಿ, ದೇಶ ರಕ್ಷಿಸಿದರು. ಸಂಘಟನಾ ತತ್ವದ ಕುರಿತು ಸಾರಿದರು. ಇದಕ್ಕೆಲ್ಲಾ ಕಾರಣ ತಾಯಿ ಜೀಜಾಬಾಯಿ. ಅವರು ವೀರತ್ವ ಮತ್ತು ಶೌರ್ಯದ ಕನಸನ್ನು ಕಟ್ಟಿಕೊಟ್ಟಿದ್ದರು. ಹಾಗೆಯೇ ಎಲ್ಲ ತಾಯಂದಿರು ತಮ್ಮ ಮಕ್ಕಳು ಉತ್ತಮ ಪ್ರಜೆಯಾಗಬೇಕೆಂಬುದನ್ನು ಕಲಿಸಬೇಕು ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಶಿವಮೊಗ್ಗದ ತಹಶೀಲ್ದಾರ ವಿ.ಎಸ್.ರಾಜೀವ್, ಸಮಾಜದ ಮುಖಂಡರಾದ ಆರ್.ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.