![raghu](https://tungataranga.com/wp-content/uploads/2024/04/raghu.jpg)
ಶಿವಮೊಗ್ಗ: ಸಣ್ಣ ಉದ್ಯಮಗಳನ್ನು ಹೆಚ್ಚು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಮೂರ್ತಿ ಸೈಕಲೋತ್ಸವ ಸಮೀಪ ಶ್ರೀ ಸೇವಾ ಎಣ್ಣೆಗಾಣವನ್ನು ಉದ್ಘಾಟಿಸಿ ಮಾತನಾಡಿ, ಮರದ ಗಾಣದ ಎಣ್ಣೆಯನ್ನು ಪ್ರಸ್ತುತ ದಿನಗಳಲ್ಲಿ ಎಲ್ಲರೂ ಬಳಸಿದರೆ ಉತ್ತಮ. ಕಳಪೆ ಹಾಗೂ ಕೆಮಿಕಲ್ ಇರುವ ಎಣ್ಣೆಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಹೃದಯಾಘಾತ, ಹೃದಯ ಸಂಬAಧಿ ಕಾಯಿಲೆಗಳು ಬರುವುದನ್ನು ನೋಡುತ್ತೇವೆ. ಮರದಗಾಣ ಶುದ್ಧ ಪರಿಶುದ್ಧ ಎಣ್ಣೆಯನ್ನು ನೀಡುತ್ತದೆ. ಕೆಮಿಕಲ್ ಮುಕ್ತವಾಗಿರುವುದರಿಂದ ಎಲ್ಲರೂ ಎಣ್ಣೆಗಾಣಗಳಿಂದ ತೆಗೆದ ಎಣ್ಣೆಗಳನ್ನೆ ಬಳಸುವುದು ಸೂಕ್ತ ಎಂದು ತಿಳಿಸಿದರು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಶಾಸಕಿ ಶಾರದಾ ಪರ್ಯಾನಾಯ್ಕ್ ಮಾತನಾಡಿ, ಪ್ರಾಚೀನ ಕಾಲದಲ್ಲಿ ಎಲ್ಲರೂ ಅವರವರ ಮನೆಗಳಲ್ಲಿ ಎತ್ತಿನ ಗಾಣಗಳನ್ನು ಬಳಸಿ ಎಣ್ಣೆಗಳನ್ನು ತಯಾರಿ ಮಾಡಿಕೊಂಡು ಉಪಯೋಗಿಸುತ್ತಿದ್ದರು. ಹಿಂದಿನ ಪದ್ಧತಿ ಮರುಕಳಿಸುತ್ತಿದೆ. ಎಲ್ಲರೂ ಮರದ ಗಾಣಗಳನ್ನು ಬಳಸುವ ದಿನಗಳು ಮರುಕಳಿಸುತ್ತಿದೆ. ಆರೋಗ್ಯ ಹಿತ ದೃಷ್ಟಿಯಿಂದ ಉತ್ತಮವಾದ ವಿಧಾನ ಎಂದರು.
![](http://tungataranga.com/wp-content/uploads/2025/02/Screenshot_2025_0208_211945.jpg)
ಶ್ರೀ ಸೇವಾ ಎಣ್ಣೆಗಾಣದ ಮಾಲೀಕ ಅನುಷಾ ಸಂತೋಷ್ ಕುಮಾರ್ ಮಾತನಾಡಿ, ಮರದ ಗಾಣದ ಎಣ್ಣೆ ಹೃದಯ ಸಂಬAಧ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಗಟ್ಟುತ್ತದೆ. ಎಣ್ಣೆಯು ನೈಸರ್ಗಿಕ ಬಣ್ಣ, ನೈಸರ್ಗಿಕ ಸುವಾಸನೆ ಮತ್ತು ನೈಸರ್ಗಿಕ ರುಚಿಯಿಂದ ಕೂಡಿರುತ್ತದೆ. ನೈಸರ್ಗಿಕ ಪೋಷಕಾಂಶಗಳನ್ನು ಹೊಂದಿರುತ್ತದೆ ಎಂದರು.
ಬAಜಾರ ಗುರು ಶ್ರೀ ಸೈನಾಭಗತ್ ಗುರು, ನಾಗರಾಜ ಸ್ವಾಮಿ, ಸಂತೋಷ್ ಕುಮಾರ್, ಜಿ.ವಿಜಯ್ ಕುಮಾರ್, ಅಭಿಷೇಕ, ಸತೀಶ್ ಚಂದ್ರ, ಮಂಜುನಾಥ್ ಕದಂ, ಕಿಶೋರ್ ಕುಮಾರ್, ಅರುಣ್ ದಿಕ್ಷಿತ್, ಶಶಿಕಾಂತ್ ನಾಡಿಗ್ ಇತರರು ಭಾಗವಹಿಸಿದ್ದರು.