ಶಿವಮೊಗ್ಗ:ಫೆ 7
ಮೈಸೂರು ರೈಲು ನಿಲ್ದಾಣದ ಮುಂಭಾಗದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಎಡಭಾಗದಲ್ಲಿ ದಿ: 07-10-2024 ರಂದು ಸುಮಾರು 45 ವರ್ಷದ ಅಪರಿಚಿತ ಪುರುಷ ಸ್ವಾಭಾವಿಕವಾಗಿ ಮೃತಪಟ್ಟಿರುತ್ತಾನೆ.
ಮೃತನು ಸುಮಾರು 5.5 ಅಡಿ ಎತ್ತರ, ಕೋಲು ಮುಖ, ಉದ್ದ ಮೂಗು, ಸದೃಢ ಮೈಕಟ್ಟು, ತಲೆಯಲ್ಲ ಸುಮಾರು 1 ಇಂಚು ಉದ್ದದ ಕಪ್ಪು ಬಿಳಿ ಕೂದಲು, ಮೀಸೆ ಇದ್ದು ಸುಮಾರು 1 ಇಂಚು ಉದ್ದದ ಕಪ್ಪುಬಿಳಿ ಮಿಶ್ರಿತ ಗಡ್ಡ ಬಿಟ್ಟಿರುತ್ತಾನೆ.
ಎಡಗೈಯಲ್ಲಿ ಹೂವು ಮತ್ತು ಎಂ.ಎಸ್. ಎಂದು ಹಚ್ಚೆ ಇರುತ್ತದೆ. ಬಲಗೈಯಲ್ಲಿ ಬೆಳ್ಳಿಯನ್ನು ಹೋಲುವ ಕಡಗ ಇರುತ್ತದೆ. ಮೈಮೇಲೆ ನೀಲಿ ಮತ್ತು ಹಳದಿ ಚೌಕಳಿ ಇರುವ ತುಂಬು ತೋಳಿನ ಶರ್ಟ್, ಕೆಂಪು ಬಣ್ಣದ ಶಾರ್ಟ್, ಒಂದು ಕಂದು ಬಣ್ಣದ ಟವಲ್, ಕಪ್ಪು ಉಡುದಾರ ಹಾಗೂ ಒಂದು ಜೊತೆ ಕೆಂಪು ಬಣ್ಣದ ಹವಾಯಿ ಚಪ್ಪಲಿ ಹಾಕಿರುತ್ತಾನೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ, ದೂ.ಸಂ: 0821-2516579, 9480802122 ನ್ನು ಸಂಪರ್ಕಿಸಬಹುದೆAದು ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.