![watert-03-1470206963](https://tungataranga.com/wp-content/uploads/2022/09/watert-03-1470206963.jpg)
ಶಿವಮೊಗ್ಗ : ಫೆಬ್ರವರಿ 07; : ಶಿವಮೊಗ್ಗ ಜಿಲ್ಲೆಯ 2024-25ನೇ ಸಾಲಿನ ಆತ್ಮ ಯೋಜನೆಯಡಿ ನೇರ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ತೀರ್ಥಹಳ್ಳಿ ತಾಲೂಕಿನ ದೇವಂಗಿ ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿಯಿರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ 45 ವರ್ಷ ವಯೋಮಿತಿಯುಳ್ಳ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರುವವರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸ್ವವಿವರಗಳೊಂದಿಗೆ ಪದವಿ ಪ್ರಮಾಣ ಪತ್ರ, ಅಂತಿಮ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಸೇವಾ ಅನುಭವ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಫೆ. 15 ರೊಳಗಾಗಿ ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
![](http://tungataranga.com/wp-content/uploads/2023/04/Screenshot_2023_0226_070755-1.jpg)
—————–
ನೀರಿನ ಕಂದಾಯ ಕಟ್ಟಲು ಭಾನುವಾರ ವಿಶೇಷ ಕೌಂಟರ್
ಶಿವಮೊಗ್ಗ ಫೆಬ್ರವರಿ.07 ): 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಫೆ.09 ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್ಗಳನ್ನು ತರೆಯಲಾಗಿದೆ.
ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾಶೀಪುರ ಮುಖ್ಯರಸ್ತೆ ಕೆನರಾ ಬ್ಯಾಂಕ್ ಎದುರು, ಪುರಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ಅಶೋಕನಗರ ನಂದಿನಿ ಬ್ಲಾಕ್ ಪೊಲೀಸ್ ಕ್ವಾಟ್ರಸ್ ಹತ್ತಿರ, ದೇವರಾಜ್ ಅರಸ್ ಬಡಾವಣೆ ಚೌಡಮ್ಮ ದೇವಸ್ಥಾನದ ಎದುರು ಪೆಟ್ರೋಲ್ ಬಂಕ್ ಹತ್ತಿರ ಹಾಗೂ ಸೀಗೆಹಟ್ಟಿ ಸರ್ಕಾರಿ ಶಾಲೆ ಆವರಣದಲ್ಲಿ ವಿಶೇಷ ವಸೂಲಾತಿ ಕೌಂಟರ್ ತೆರೆದಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.
—————-
![](http://tungataranga.com/wp-content/uploads/2025/02/IMG-20250205-WA0022.jpg)
ತುರ್ತು ಚಿಕಿತ್ಸಾ ವೈದ್ಯರ ನೇರ ಸಂದರ್ಶನಕ್ಕೆ ಆಹ್ವಾನ
ಶಿವಮೊಗ್ಗ ಫೆಬ್ರವರಿ.07 ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಅಧೀನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿಯಿರುವ 13 ತುರ್ತು ಚಿಕಿತ್ಸಾ ವೈದ್ಯರು/ಅಪಘಾತ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ ಮತ್ತು ಮೆರಿಟ್ ಅಧಾರದಲ್ಲಿ ನೇಮಕ ಮಾಡಲು ಅರ್ಹ ಎಂ.ಬಿ.ಬಿ.ಎಸ್. ಪದವೀಧರ ವೈದ್ಯರುಗಳ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು ಮತ್ತು ಮೂಲ ಪ್ರತಿಗಳು, ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಫೆ. 12 ರಂದು ಬೆಳಿಗ್ಗೆ 11.00 ರಿಂದ ಮ. 1.00 ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆ & ಕು.ಕ.ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222382 ನ್ನು ಸಂಪರ್ಕಿಸುವುದು.
—————————–