ಶಿವಮೊಗ್ಗ, ಫೆಬ್ರವರಿ 04 : ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾನದಿಯ ಮಧ್ಯದಲ್ಲಿ ಮರಳು ಕಲ್ಲು ಮಣ್ಣಿನ ದಂಡೆಯ ಮೇಲೆ ರುಂಡ ಇಲ್ಲದ ಗಂಡಸ್ಸಿನ ಶವ ಕೊಳೆತು ಹೋಗಿರುವ ಸ್ಥಿತಿಯಲ್ಲಿ ದೊರಕಿದ್ದು, ಹೆಸರು, ವಿಳಾಸ ದೊರೆತಿಲ್ಲ.
ಮೃತ ದೇಹದ ಮೇಲೆ ಒಂದು ಮೆರೂನ್ ಕಲರಿನ ತುಂಬು ತೋಳಿನ ವುಡಿ ಇದ್ದು ಕಾಲರ್ ಹತ್ತಿರ ಟೀಮ್ ಸ್ಪಿರಿಟ್ ಹಾಗೂ ಹಡ್ಸನ್ ಎವರ್ ಮೆನ್ ಸ್ಟ್ರಾಂಗ್ ಎಂಬ ಸ್ಟಿಕರ್ ಇದ್ದು ಎಂ ಸೈಜಿನದಾಗಿರುತ್ತದೆ. ಅದರ ಒಳಭಾಗದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಅಡ್ಡ ಗೀರಿನ ಟೀಶರ್ಟ್ ಧರಿಸಿದ್ದು, ತಿಳಿ ನೀಲಿ ಬಣ್ಣದ ಜೀನ್ಸ್ ಇರುತ್ತದೆ.
ಈ ವ್ಯಕ್ತಿಯ ವಾರಸ್ಸುದಾರರ ಇದ್ದಲ್ಲಿ ದೂ.ಸಂ.: 08182-261418/ 261410/ 261422/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.