ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೩೯ನೇ ರಾಜ್ಯಸಮ್ಮೇಳನವನ್ನು ಕಲ್ಪತರುನಾಡು, ಸಿದ್ದಶರಣ ದಾಸೋಹದ ನೆಲವಾಗಿರುವ ತುಮಕೂರಿನಲ್ಲಿ ಜ. ೧೮ ಮತ್ತು ೧೯ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕಾರ್ಮಿಕ ಕಾಯ್ದೆಯಡಿ ನೋಂದಾಯಿಸಿಲ್ಪಟ್ಟ ಅತಿ ಹೆಚ್ಚಿನ ಕಾರ್ಯನಿರತ ಪತ್ರಕರ್ತರ ಸದಸ್ಯತ್ವವನ್ನೊಳಗೊಂಡ ದೇಶದ ಏಕೈಕ ದೊಡ್ಡ ಪತ್ರಕರ್ತರ ಸಂಘಟನೆಯಾಗಿದೆ. ಸುಮಾರು ೮ ಸಾವಿರ ಸದಸ್ಯರನ್ನು ಹೊಂದಿದೆ ಎಂದರು.
ಪತ್ರಕರ್ತರು ಎದುರಿಸುತ್ತಿರುವ ವೃತ್ತಿ ಪರ ಸಮಸ್ಯೆಗಳು , ಆರೋಗ್ಯ, ಪ್ರೋತ್ಸಾಹಕ ಯೋಜನೆಗಳ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲು ಸಮ್ಮೇಳನಗಳು ಸಮರ್ಥ ವೇದಿಕೆಯಾಗುತ್ತವೆ. ಈ ಎಲ್ಲಾ ಸಂಘಟನಾತ್ಮಕ ಚಟುವಟಿಕೆಗಳನ್ನು ವಾರ್ಷಿಕ ಸಮ್ಮೇಳನಗಳಲ್ಲಿ ಮಂಥನ ಮಾಡುವ ಅವಕಾಶವನ್ನು ಸೃಷ್ಟಿಕೊಳ್ಳಲಾಗಿದೆ. ಪತ್ರಿಕೋದ್ಯಮ, ಪತ್ರಕರ್ತರು ಸೇರಿದಂತೆ ನ್ಯೂಸ್ ರೂಂ ನ ಎಲ್ಲಾ ಆಯಾಮಗಳ ಕುರಿತು ಚಿಂತನ-ಮಂಥನ ಮಾಡುವುದು , ಈ ಮೂಲಕ ಪತ್ರಿಕೋದ್ಯಮದ ಸಮಗ್ರ ಹಿನ್ನೋಟ, ಮುನ್ನೋಟಗಳನ್ನು ಕಾಣುವುದು ಸಮ್ಮೇಳನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.
ಜ. ೧೮ ರಂದು ಬೆಳಗ್ಗೆ ೮.೩೦ಕ್ಕೆ ತುಮಕೂರಿನ ಟೌನ್ ಹಾಲ್ ಬಿಜಿಎಸ್ ವೃತ್ತದಿಂದ ಪತ್ರಕರ್ತರ ಸಾಂಸ್ಕೃತಿಕ ಮೆರಗಿನ ಮೆರವಣಿಗೆಯನ್ನು ಗೃಹ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಉದ್ಘಾಟಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಈ ಸಮಾರಂಭಗಳಲ್ಲಿ ಹಿರೇ ಮಠಾಧೀಕ್ಷರಾದ ಡಾ. ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಮಕೃ? ವಿವೇಕಾನಂದ ಆಶ್ರಮದ ಡಾ. ಶ್ರೀವಿರೇಶಾನಂದ ಸರಸ್ವತಿ ಸ್ವಾಮೀಜಿ, ಸ್ವಾಮಿ ಜಪಾನಂದಜೀ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಇದೇ ದಿನ ಬೆಳಗ್ಗೆ ೧೧ ಗಂಟೆಗೆ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ತುಮಕೂರು ಜಿಲ್ಲೆಯ ಹಾಲಿ ಶಾಸಕರು, ಮಾಜಿ ಶಾಸಕರು, ಸಂಸದರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ವಹಿಸಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ ಸಚಿವ ಕೆ.ಎನ್ ರಾಜಣ್ಣ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳು ಆತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಎರಡು ದಿನಗಳ ಸಮ್ಮೇಳನದಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಮಹತ್ವದ ಸಂವಾದ ಮತ್ತು ಗೋಷ್ಟಿಗಳು ನಡೆಯಲಿವೆ.
ಜ. ೧೮ ರಂದು ಮಧ್ಯಾಹ್ನ ೨ ಗಂಟೆಗೆ ಸಂವಿಧಾನ ಮತ್ತು ಮಾಧ್ಯಮ ವಿ?ಯವಾಗಿ ನಡೆಯುವ ಗೋಷ್ಠಿಯನ್ನು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ ಪಾಟೀಲ್ ಅವರು ಉದ್ಘಾಟಿಸಲಿದ್ದು, ಪತ್ರಕರ್ತ, ಮಾಧ್ಯಮ ತಜ್ಞ ಜಿ.ಎನ್ ಮೋಹನ್ ಅವರು ವಿ?ಯ ಮಂಡಿಸಲಿದ್ದು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್ ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ೪.೩೦ಕ್ಕೆ ಸುದ್ದಿಮನೆ ಮತ್ತು ಪೋಟೋಗ್ರಾಫಿ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಅವರು ಉದ್ಘಾಟಿಸಲಿದ್ದು, ಹಿರಿಯ ಪತ್ರಿಕಾಛಾಯಾಗ್ರಾಹಕ ಕೆ.ಗೋಪಿನಾಥ್ ಅನುಶಾಂತರಾಜ್ ಶರಣು ಬಸಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.
ಜ. ೧೯ ರಂದು ಬೆಳಗ್ಗೆ ೧೦.೩೦ಕ್ಕೆ ಮಾಧ್ಯಮ ಮತ್ತು ಓದುಗರು /ನೋಡುಗರು/ಕೇಳುಗರು ಗೋಷ್ಠಿಯನ್ನು ವಿಜಯವಾಣಿ ಸಂಪಾದಕ ಕೆ.ಎನ್ ಚನ್ನೆಗೌಡ ಉದ್ಘಾಟಿಸಿದರೆ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ ಅವರು ಅಧ್ಯಕ್ಷತಗೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಅನಂತ ಚಿನಿವಾರ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಎಂ.ಎಸ್. ಸ್ವಪ್ನ ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ ೧೨ ಕ್ಕೆ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು ಗೋಷ್ಠಿಯನ್ನು ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಉದ್ಘಾಟಿಸಲಿದ್ದು, ವಿಜಯಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ , ಕಸ್ತೂರಿ ಸಂಪಾದಕ ಶಾಂತಲಾ ಧರ್ಮರಾಜ್, ದಾವಣಗೆರೆ ವಿವಿ ಡಾ. ಶಿವಕುಮಾರ ಕಣಸೋಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಧ್ಯಾಹ್ನ ೨.೩೦ಕ್ಕೆ ಸ್ಥಳೀಯ ಪತ್ರಿಕೆಗಳು /ಜಾಹೀರಾತು/ವಿತರಕರು ಗೋಷ್ಟಿಯನ್ನು ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್ ಉದ್ಘಾಟಿಸಲಿದ್ದು ಹಿರಿಯ ಪತ್ರಿಕಾ ಸಂಪಾದಕ ಎಸ್ ನಾಗಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಎರಡು ದಿನಗಳ ಗೋಷ್ಠಿಗಳಲ್ಲಿ ಸಂವಾದಕರಾಗಿ ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ಶಿವಕುಮಾರ್ ಬೆಳ್ಳಿತಟ್ಟೆ, ಉಗಮ ಶ್ರೀನಿವಾಸ್, ಕುಚ್ಚಂಗಿ ಪ್ರಸನ್ನ, ಮರಿಯಪ್ಪ, ಉಮೇಶ್ ಭಟ್, ಹರೀಶ್ ರೈ, ಗುರುನಾಥ್, ಬಿ.ಎಂ ಹನೀಫ್, ಟಿ.ಎಂ. ಸತೀಶ್ ಮೊದಲಾದವರು ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳ ಸಭೆ ಮತ್ತು ಕಲ್ಪತರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಮ್ಮೇಳನವು ಸಾಂಸ್ಕೃತಿಕ ಸಮಾರಂಭಗಳನ್ನು ಒಳಗೊಂಡಿದ್ದು ಖ್ಯಾತ ಗಾಯಕಿ ಶಮಿತ ಮಲ್ನಾಡ್ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ವೈದ್ಯನಾಥ್, ಗಾ.ರಾ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್ ಉಪಸ್ಥಿತರಿದ್ದರು.