ಶಿವಮೊಗ್ಗ, ಜ. 10
ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸಾಮಾನ್ಯವಾಗಿ ಮಂಗಳವಾರದAದು ವಾರದ ರಜೆಯಾಗಿರುತ್ತದೆ. ಆದರೆ ಸಂಕ್ರಾAತಿ ಹಬ್ಬದ ಹಿನ್ನೆಲೆ ದಿನಾಂಕ: 14-01-2025 ರ ಮಂಗಳವಾರ ಸಹ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಸಾರ್ವಜನಿಕರು ಮೃಗಾಲಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ಹುಲಿ-
ಸಿಂಹಧಾಮದಲ್ಲಿ ಜ.14 ರ ಮಂಗಳವಾರವೂ ಸಹ ತೆರೆದಿರುತ್ತದೆ. ಪ್ರವಾಸಿಗರು ಇದರ ಸದುಪಯೋಗ ಪಡೆಯಬೇಕೆಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.