=
– ಎಫ್ ಕೆಸಿಸಿಐ ವತಿಯಿಂದ ಆಯೋಜಿಸಿರುವ ಮಂಥನ್ 17ನೇ ಆವೃತ್ತಿಯ ಕರ್ಟೇನ್ ರೈಸರ್ ಸಮಾರಂಭ
– ಉನ್ನತ ಬುದ್ಧಿಶಕ್ತಿ, ಪ್ರಾಮಾಣಿಕ ಪ್ರಯತ್ನ ಮತ್ತು ಪ್ರಾಮಾಣಿಕ ಕಾರ್ಯನಿರ್ಹಣೆಯಿಂದ ಯಶಸ್ಸು ಸಾಧ್ಯ
ಬೆಂಗಳೂರು, ಜ. 9: ಜಗತ್ತಿನ ಭವಿಷ್ಯವು ಕನಸುಗಳ ಮೇಲೆ ನಂಬಿಕೆ ಇರಿಸುವವರ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಕನಸುಗಳನ್ನು ಸಾಕಾರಗೊಳಿಸುವ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು ಎಂದು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ) ವತಿಯಿಂದ ಆಯೋಜಿಸಿರುವ ಮಂಥನ್ 17ನೇ ಆವೃತ್ತಿಯ ಕರ್ಟೇನ್ ರೈಸರ್ ಸಮಾರಂಭದಲ್ಲಿ ಮಾತನಾಡಿದ ಅವರು, ಯಶಸ್ಸು ಎಂಬುದು ಯಾಂತ್ರಿಕ ಮತ್ತು ನಿಗೂಢವಲ್ಲ. ಅದು ಉನ್ನತ ಬುದ್ಧಿಶಕ್ತಿ, ಪ್ರಾಮಾಣಿಕ ಪ್ರಯತ್ನ ಮತ್ತು ಪ್ರಾಮಾಣಿಕ ಕಾರ್ಯನಿರ್ಹಣೆಯಿಂದ ಬರುತ್ತದೆ. ಈ ನಿಟ್ಟಿನಲ್ಲಿ ಉದ್ಯಮಿಗಳು, ಅರಲ್ಲೂ ಮಖ್ಯವಾಗಿ ಯುವ ಉದ್ಯಮಿಗಳು ಕೆಲಸ ಮಾಡಬೇಕು ಎಂದರು.
ಎಫ್ ಕೆಸಿಸಿಐ ಯಶಸ್ವಿ ಉದ್ಯಮಿಗಳಿಗೆ ಅವಕಾಶ ಮಾಡಿಕೊಡುತ್ತಿದೆ. ಉದ್ಯಮ ಕ್ಷೇತ್ರದಲ್ಲಿ ಆರ್ಥಿಕತೆ, ಶಿಕ್ಷಣ, ಶಕ್ತಿ, ಉದ್ಯಮಶೀಲತೆ ಮತ್ತು ಸಾನುಭೂತಿ ಇದ್ದರೆ ಯಶಸ್ಸು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಈ ದಿಸೆಯಲ್ಲಿ ನಮ್ಮ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ನಾವು ಯಾವ Bರ್ಗದವರೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಅವಲಂಬಿತವಾಗಿದೆ. ಶಿಕ್ಷಕರ ಜತೆ ಸಂಪರ್ಕದಲ್ಲಿದ್ದರೆ ವಿದ್ಯಾರ್ಥಿಗಳಾಗುತ್ತೇವೆ. ವಿಜ್ಞಾಿಗಳ ಜತೆ ಇದ್ದರೆ ಸಂಶೋಧಕರಾಗುತ್ತೇವೆ ಯೋಧರ ಜತೆ ಸಂಪರ್ಕದಲ್ಲಿದ್ದರೆ ದೇಶಕ್ಕಾಗಿ ನಾನು ಸಾಧಿಸಿದ್ದು ಕಡಿಮೆ, ಇನ್ನಷ್ಟು ಸಾಧಿಸಬೇಕು ಎಂದು ಯೋಚಿಸುತ್ತೇವೆ. ಅದೇ ರೀತಿ ಉದ್ಯಮ ಕ್ಷೇತ್ರದಲ್ಲಿರುವವರು ದೇಶಕ್ಕಾಗಿ ಇನ್ನಷ್ಟು ಸಾಧಿಸುವ ಪ್ರಯತ್ನದಲ್ಲಿ ಮುಂದುವರಿಯಬೇಕು ಎಂದರು.
ದೇಶದ ಆರ್ಥಿಕತೆಗೆ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ಸ್ಮರಿಸಿದ ಅವರು, ವಿತ್ತ ಮಂತ್ರಿಯಾಗಿದ್ದಾಗ ಮನಮೋಹನ್ ಸಿಂಗ್ ತೆಗೆದುಕೊಂಡ ನಿರ್ಣಯಗಳು ಇಂದು ಭಾರವನ್ನು ಐದು ಅತಿ ದೊಡ್ಡಆರ್ಥಿಕ ಶಕ್ತಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಸೇರಿಸಿದೆ. ಈಗಿನ ಸರ್ಕಾರದ ಕ್ರಮಗಳಿಂದಾಗಿ 2027ರ ವೇಳೆಗೆ ಭಾರತವು ವಿಶ್ವದ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಅಭಿವೃದ್ಧಿ ಹೊಂದಲಿದೆ. ಈ ಗುರಿ ಸಾಧಿಸುವಲ್ಲಿ ಉದ್ಯಮ ವಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕಳೆದ ಏಳು ತಿಂಗಳಲ್ಲಿ ಭಾರತದಲ್ಲಿ ವಿದೇಶಿ ನೇರ ಬಂಡವ ಾಳ ಹೂಡಿಕೆ 4.5 ಬಿಲಿಯನ್ ಡಾಲರ್ ನಷ್ಟಾಗಿದೆ. ಅದರಲ್ಲೂ ಮೂಲ ಸೌಕರ್ಯ ಕ್ಷೇತ್ರದಲ್ಲಿ ಶೇ. 45ರಷ್ಟು ವಿದೇಶಿ ನೇರ ಬಂಡವಾಳಹೂಡಿಕೆಯಾಗಿದೆ. ರಕ್ಷಣಾ ವಲದಲ್ಲೂ ಹೂಡಿಕೆ ಹೆಚ್ಚಾಗಿದೆ. ಉದ್ಯಮಶೀಲತೆ ಮತ್ತು ಸ್ಟಾರ್ಟ್ಅಪ್ ಗಳಿಗೆ ಪೂರಕ ವಾತಾವರಣ ಇರುವ ಬೆಂಗಳೂರಿಗೆ ಇಂತಹ ಕಾರ್ಯಕ್ರಮಗಳು ಹೆಚ್ಚು ಶಕ್ತಿ ನೀಡುತ್ತದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಉದ್ಯಮ ಕ್ಷೇತ್ರದಬೆಳವಣಿಗೆಯಲ್ಲಿ ಎಫ್ ಕೆಸಿಸಿಐ ಪ್ರಮುಖ ಪಾತ್ರ ವಹಿಸುತ್ತಿದೆ. ಉದ್ಯಮ ಕ್ಷೇತ್ರದಲ್ಲಿ ಯಾವ ರೀತಿ ಹೂಡಿಕೆ ಮಾಡಬಹುದು, ಮೂಲಸೌಕರ್ಯ ಅಭಿವೃದ್ಧಿಗೆ ಏನು ಕ್ರಮ ಕೈಗೊಳ್ಳಬೇಕು ಎಂದು ಯೋಚಿಸುತ್ತದೆ. ಉದ್ಯಮದತ್ತ ಆಕರ್ಷಿತರಾಗುವವರಲ್ಲಿ ವಿಶ್ವಾಸ ಮೂಡಿಸುತ್ತಿದೆ. ಇದರ ಲಾಭ ಪಡೆದು ಯಶಸ್ವಿ ಉದ್ಯಮಿಯಾಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಉದ್ಯಮ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡುವ ಆರ್ಥಿಕ ನೆರವು, ಸಬ್ಸಿಡಿ ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ಇದರ ಪ್ರಯೋಜನ ಪಡೆಯು ಸ್ಥಳೀಯ ಉದ್ಯಮಿಗಳಿಗೆ ದೊಡ್ಡ ಉದ್ಯಮಿಗಳು ಬೆಂಬ ನೀಡಿದರೆ ಇಬ್ಬರೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೊಡ್ಡಉದ್ಯಮಗಳು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಫ್ ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಕೃಷ್ಣನ್, ಹಿರಿಯ ಉಪಾಧ್ಯಕ್ಷರಾದ ಉಮಾರೆಡ್ಡಿ, ಉಪಾಧ್ಯಕ್ಷ ಸಾಯಿರಾಂ ಪ್ರಸಾದ್, ಮಾಜಿ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಮಂಥನ್ ಅಧ್ಯಕ್ಷರಾದ ತೇಜಶ್ರೀ ಬಿ.ಎ., ಮಂಥನ್ ಸಲಹೆಗಾರರಾದ ಡಾ. ಸಿಎ ಐ.ಎಸ್. ಪ್ರಸಾದ್ ಮತ್ತಿತರರು ಇದ್ದರು.
ಕೋಟ್–
ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಉದ್ಯಮ ಯೋಜನೆಗಳ ಕುರಿತಂತೆ ರಾಜ್ಯದ ಯುಜಿ, ಪಿಜಿ, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ನಾವು ಸ್ಪರ್ಧೆಗಳನ್ನು ಏರ್ಪಡಿಸಿದ್ದೇವೆ. ವಿದ್ಯಾ್ಥಿಗಳು ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಕಾಲೇಜುಗಳು ಪ್ರೋತ್ಸಾಹಿಸೇಕು. ಸ್ಪರ್ಧೆಯಲ್ಲಿ ಗೆದ್ದವರಿಗೆ 10 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿಗಳಿಂದ ಹೊರಹೊಮ್ಮುವ ಅತ್ಯುತ್ತಮ ಯೋಜನೆಗಳಿಗೆ ಹೂಡಿಕೆ ಮಾಡಲು ಹೂಡಿಕೆದಾರರೂ ಸಿದ್ಧರಿದ್ದಾರೆ.
–ತೇಜಶ್ರೀ ಬಿ.ಎಂ., ಅಧ್ಯಕ್ಷರು, ಮಂಥನ್