ಜೀವನದಲ್ಲಿ ಎಲ್ಲಿ ಬೇಕಾದರೂ ನಮ್ಮ ನಡಯವಿನದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ, ಅದರಿಂದ ಖುಷಿಗಳನ್ನು ಅನುಭವಿಸುವ ಅವಕಾಶಗಳನ್ನು ನೀಡಿರುವುದು ಸಹಜವಲ್ಲವೇ? ಆದರೆ ನಮ್ಮ ನಡುವಿನ ಬದಲಾವಣೆಗಳು, ಸದ್ದಿಲ್ಲದೆ ವಿಕಾರಾತ್ಮಕ ಅಂಶಗಳಿಗೆ ಸಾಗುತ್ತಿವೆ. ಈ ನೆಲೆಯಲ್ಲಿ ಚಿಂತಿಸಿದಾಗ ನಮ್ಮ ನಡುವೆ ಇರುವಂತಹ ಮೊಬೈಲ್ ಫೋನ್ ಗಳು ಹಾಗೂ ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳು ಸಕಾರಾತ್ಮಕವಾಗಿ ನಮ್ಮನ್ನು ಬೆಳೆಸಿ ಗುರುತಿಸುವ ಬದಲು ವಿಕಾರಾತ್ಮಕ ಕಡೆ ಹೆಚ್ಚಾಗಿ ನೂಕುತ್ತಿರುವುದು ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣ.


ಹಿಂದೆ ಯಾವತ್ತೂ ನಡೆದ ಘಟನೆಯನ್ನು ಅದೆಷ್ಟೋ ತಿಂಗಳ ನಂತರ ಹೇಳಬೇಕಾದ ಪರಿಸ್ಥಿತಿ ಇತ್ತು ಎಂಬುದನ್ನು ನಾವು ಕೇಳಿದ್ದೇವೆ, ಹಿಂದಿನ ಚಿತ್ರಲೋಕದಲ್ಲಿ ಘಟನಾವಳಿಗಳನ್ನು ಬೆಳಕು ಹಾಕಿದಾಗ ಇಂತಹ ಸನ್ನಿವೇಶಗಳನ್ನು ಕಾಣುತ್ತೇವೆ. ದೂರದ ಎಲ್ಲೋ ಇದ್ದ ಅಂಚೆ ಇಲಾಖೆಯ ಸದುಪಯೋಗ ನಮಗೆ ಆಗ ಸಿಗುತ್ತಿತ್ತು. ವಾಹನಗಳ ಸಂಚಾರ ಅತ್ಯಂತ ಕಡಿಮೆ ಇತ್ತು. ಈಗ ವ್ಯವಸ್ಥೆ ತುಂಬಾ ಬದಲಾವಣೆಯಾಗಿದೆ. ಯಾವುದೇ ಕ್ಷಣದಲ್ಲಿ ಯಾರನ್ನು ಬೇಕಾದರೂ ಭೇಟಿಯಾಗಬಲ್ಲ, ಮಾಹಿತಿ ಹಂಚಬಲ್ಲ ವ್ಯವಸ್ಥೆಗಳು ನಮ್ಮ ನಡುವೆ ಇವೆ. ವಿಶೇಷವಾಗಿ ನಮ್ಮ ನಮ್ಮ ಲ್ಯಾಂಡ್ ಫೋನ್ ಗಳು ಈಗ ಮರೆಯಾಗುತ್ತಾ ಹೊಸ ಹೊಸ ಬಗೆಯ ಚಿತ್ರವಿಚಿತ್ರ, ವಿಭಿನ್ನ ತರಹದ ಮೊಬೈಲ್ ಗಳು ಎಲ್ಲರ ಕೈಲಿ ರಾರಾಜಿಸುತ್ತಿವೆ.


ಯಾರು ಯಾರನ್ನು ಬೇಕಾದರೂ ಅತ್ಯಂತ ಸುಲಭವಾಗಿ ಮಾತನಾಡಿಸುವ ಅವಕಾಶಗಳು ದೊರೆತಿರುವುದು ನಿಜಕ್ಕೂ ಸಕಾರಾತ್ಮಕ ಅಥವಾ ಪಾಸಿಟಿವ್ ಅಂಶವೇ ಸರಿ. ಯಾವುದೋ ಅನಿವಾರ್ಯದ ಸಂದರ್ಭದಲ್ಲಿ ಯಾವುದೋ ಅಗತ್ಯದ ನಡುವೆ ನಮ್ಮ ನಡುವಿನ ಸಂಪರ್ಕ ಸಾವಿರಾರು ಸಂಕಷ್ಟಗಳಿಂದ ನಮ್ಮನ್ನು ದೂರ ಮಾಡಿದೆ. ಆದರೆ ಈ ಮೊಬೈಲ್ ಬಳಕೆ ಚಿತ್ರ ವಿಚಿತ್ರವಾಗಿ ಹೊಸತನದಲ್ಲಿ ಬದಲಾಗುತ್ತಿರುವುದು ದುರಂತವಲ್ಲವೇ? ಅತಿ ಹೆಚ್ಚು ಸುಳ್ಳುಗಳನ್ನು ಅತ್ಯಂತ ಸುಲಭವಾಗಿ ಹೇಳಬಹುದಾದ ಸಂಪರ್ಕ ಸಾಧನವೆಂದರೆ ಅದು ಮೊಬೈಲ್ ಎಂದು ಹೇಳಲಾಗುತ್ತಿದೆ. ಪೊಲೀಸರಾದರೆ ಅಥವಾ ಸಂಬಂಧಪಟ್ಟ ತನಿಖಾ ಸಂಸ್ಥೆಯಾದರೆ ಮೊಬೈಲ್ ಇರುವ ಸ್ಥಳವನ್ನು ಅತ್ಯಂತ ಸುಲಭವಾಗಿ ಪತ್ತೆ ಹಚ್ಚಬಹುದು. ಆದರೆ ಸಾಮಾನ್ಯ ಮನುಷ್ಯ ಹೇಗೆ ತಾನೇ ಅವರು ಹೇಳಿದ್ದು ಸರಿಯೋ ಸುಳ್ಳೋ ಎಂದು ಯೋಚಿಸಲು ಸಾಧ್ಯ? ಪಕ್ಕದ ಮನೆಯಲ್ಲೇ ಇದ್ದು ಇನ್ನೊಂದು ಕಡೆ ಎಲ್ಲೋ ಹೋಗಿದ್ದೇನೆ ಎನ್ನುವ ಇಲ್ಲವೇ ಕಚೇರಿಯಲ್ಲಿ ಇದ್ದೇನೆ ಎನ್ನುವ ಎಷ್ಟೋ ಕಥೆಗಳನ್ನ ನಾವು ಇತ್ತೀಚಿನ ನೈಜ ಜೀವನದಲ್ಲಿ ಹಾಗೂ ಚಿತ್ರ ಲೋಕಗಳಲ್ಲಿ ಕಾಣುತ್ತಿದ್ದೇವೆ.

ಸುಳ್ಳಿನ ಸರದಾರ ಈ ಮೊಬೈಲ್ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಎಲ್ಲರ ಮೊಬೈಲ್ ಅಲ್ಲ, ಮೊಬೈಲ್ ಬಳಸಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಆಂತರ್ಯದಲ್ಲಿ ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕೆಂಬ ಪ್ರಜ್ಞೆ ಇದ್ದರೆ ಮೊಬೈಲ್ ಅಂತಹ ಸಂಪರ್ಕ ಸೇತುವೆ ಬೇರೆ ಎಲ್ಲೂ ಸಿಗಲು ಸಾಧ್ಯವಿಲ್ಲ ಅಲ್ಲವೇ. ಅಂತಯೇ ಇತ್ತೀಚಿನ ದಿನಮಾನಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡ ಫೇಸ್ಬುಕ್, ವಾಟ್ಸಾಪ್ ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣ ಗಳು ನಾನಾ ಒಳ್ಳೆ ವಿಷಯಗಳನ್ನು ಸಕಾರಾತ್ಮಕ ವಿಷಯಗಳನ್ನು ಪಾಸಿಟಿವ್ ಮನಸುಗಳನ್ನು ನಮ್ಮ ನಡುವೆ ಬೆಳೆಸಿವೆ, ಬೆಳೆಸುತ್ತಿವೆ. ಆದರೆ ಅಷ್ಟೇ ಪ್ರಮಾಣದಲ್ಲಿ ವಿಕಾರಾತ್ಮಕ ನೆಗೆಟಿವ್ ಅಂಶಗಳನ್ನು ನಮ್ಮ ನಡುವೆ ಬಿತ್ತುತ್ತಿದೆ ಎಂಬುದು ಮತ್ತೊಂದು ಕಡೆಯ ದುರಂತದ ಸಂಗತಿಯಾಗಿ ಪರಿವರ್ತನೆಯಾಗಿದೆ ಅಲ್ಲವೇ.?


ಒಂದಂತೂ ಸತ್ಯ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ವಾಟ್ಸಪ್ ಗಳಲ್ಲಿ ಸುದ್ದಿ ಸಂದೇಶಗಳು ಮಾಹಿತಿಗಳು, ನಗುವಿನ ಅಲೆ, ಸಂಗೀತ, ಸಾಹಿತ್ಯ ಹೀಗೆ ಎಲ್ಲ ಬಗೆಯ ಸಕಾರಾತ್ಮಕ ಸಂದೇಶಗಳು ನಮ್ಮ ನಡುವೆ ಹರಿದಾಡುತ್ತಿದೆ. ವಿಕಾರಾತ್ಮಕವಾಗಿ ಇರುವಂತಹ ಎಷ್ಟೋ ಸನ್ನಿವೇಶಗಳು ನಮ್ಮ ನಡುವೆ ಸಕಾರಾತ್ಮಕ ಎಂದು ಗುರುತಿಸಿಕೊಂಡು ಪಾಸಿಟಿವ್ ಮನಸುಗಳನ್ನು ನೆಗೆಟಿವ್ ಕಡೆ ತಳ್ಳುತ್ತಿರುವುದು ಮತ್ತೊಂದು ಬಗೆಯ ವಿಚಿತ್ರ ಎನಿಸುತ್ತಿದೆ ಅಲ್ಲವೇ? ಇಲ್ಲಿ ಪಾಸಿಟಿವ್ ಮನಸು ಕೇವಲ ಅದೇ ಮನದಲ್ಲಿ ಯೋಚಿಸಿದರೆ ಚಿಂತೆ ಇಲ್ಲ. ಅಲ್ಲಿನ ವಿಕಾರಾತ್ಮಕ ಅಂದರೆ ನೆಗೆಟಿವ್ ಯೋಚನೆಗಳನ್ನು ಸಕಾರಾತ್ಮಕವಾಗಿ ಅಂದರೆ ಪಾಸಿಟಿವ್ ಮನದಿಂದ ಅನುಭವಿಸಿದರೆ ಹಾಗೂ ನೋಡಿದರೆ ಆಸ್ವಾದಿಸಿದರೆ ಅದೊಂದು ಮುಂದೆ ತಪ್ಪಾಗುವ, ತಪ್ಪು ಮಾಡಿಸುವ ಸಾಧ್ಯತೆ ನಮ್ಮ ಕಣ್ಣ ಮುಂದೆಯೇ ಬಹುತೇಕ ನಡೆದಿರುವುದು ಈಗಲೂ ಸಾಮಾನ್ಯವಾಗಿದೆ.


ಈ ವಾಟ್ಸಪ್ ಗಳು ಕೆಲವರಿಗೆ ಸೂಚನೆಯ ಸಂದೇಶವಾಗಿದ್ದರೆ ಕೆಲವೊಬ್ಬರಿಗೆ ಸಂದೇಶಗಳನ್ನು ಸಾರುವ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಒಂದು ಬಗೆಯ ವಿಶ್ವಕೋಶದಂತೆ ವರ್ತಿಸುತ್ತದೆ. ಮತ್ತೆ ಕೆಲವರಿಗೆ ಇದೊಂದು ಮಾಮೂಲಿ ಆಟದಂತೆ ಕಾಣಿಸಿಕೊಳ್ಳುತ್ತಿದೆ. ಒಟ್ಟಾರೆ ಮೊಬೈಲ್ ನ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ನಮ್ಮ ನಡುವೆ ಯಾವಾಗಲೂ ಸಕಾರಾತ್ಮಕವಾಗಿರಲಿ ಒಳ್ಳೆಯ ವಿಷಯವನ್ನು ಹಂಚಿ ಒಳ್ಳೆಯತನವನ್ನು ಉಳಿಸಿ ಬೆಳೆಸಿಕೊಳ್ಳುವ ಕಾರ್ಯ ನಡೆಯಬೇಕಿದೆ ಎಂಬುದು ಮುಕ್ತ ಮನದ ಮಾತು.
(ಮುಂದುವರೆಯುತ್ತದೆ)

By admin

ನಿಮ್ಮದೊಂದು ಉತ್ತರ

error: Content is protected !!