ಶಿವಮೊಗ್ಗ ಜ.೦3: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಕಳೆದ ೧೯ ವರ್ಷ ಗಳಿಂದ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದಿದ್ದೇವೆ. ನಮ್ಮ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಈ ಸಮ್ಮೇಳನ ಏರ್ಪಡಿಸಿ ನಂತರ ರಾಜ್ಯ ಮಟ್ಟಕ್ಕೆ ನಮ್ಮ ಜಿಲ್ಲೆಯ ಮಕ್ಕಳು ಭಾಗವಹಿಸುತ್ತಾರೆ.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಸಂಸ್ಥೆಯು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಾ ಬಂದಿದ್ದೇವೆ. ನಾವು ನಮ್ಮ ಜಿಲ್ಲೆಯಲ್ಲಿ ಶಾಲಾ ಹಂತದಲ್ಲಿ, ಪ್ರತಿ ಪ್ರೌಢಶಾಲಾ ಆಯ್ದ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನಾ ಕಮ್ಮಠ ಏರ್ಪಡಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಮಾಡಿಸುತ್ತೇವೆ. ಸ್ಥಳದಲ್ಲೇ ಅವರು ಇಚ್ಚೆಪಡುವ ರೀತಿಯಲ್ಲಿ ಕಥೆ, ಕವನ, ಪ್ರಬಂಧ ಬರೆಯಿಸುತ್ತೇವೆ. ನಂತರ ಸ್ಥಳದಲ್ಲಿ ಅವುಗಳ ಮೌಲ್ಯ ಮಾಪನ ಮಾಡುತ್ತೇವೆ. ತಪ್ಪು, ಸರಣಿಗಳನ್ನು ಅವರಿಗೆ ಮನದಟ್ಟು ಮಾಡುತ್ತೇವೆ. ಈ ರೀತಿಯ ನಿರಂತರ ಕೆಲಸ ನಡೆಯುತ್ತಿದೆ.

 ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಶಾಲೆಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ನಮ್ಮ ಸಂಪನ್ಮೂಲ ವ್ಯಕ್ತಿಗಳನ್ನು ಇಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ.

 ಈ ವರ್ಷ ಇಪ್ಪತ್ತನೆಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ. ಕನ್ನಡದ ಎಲ್ಲಾ ಸಾಹಿತ್ಯ ಬರೆಯಲು ತೊಡಗಿರುವ ಮಕ್ಕಳಿಗೆ ಭಾಗವಹಿಸಲು ಅವಕಾಶವಿದೆ* *ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ. ಓದುವ ತರಗತಿ, ಶಾಲೆ, ಪುಸ್ತಕ ಪ್ರಕಟವಾಗಿದ್ದರೆ ಮಾಹಿತಿ, ಇದುವರೆಗೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿ ಪ್ರತಿಭೆ ಅನಾವರಣ ಗೊಂಡಿದ್ದರೆ ಆ ಎಲ್ಲಾ ಮಾಹಿತಿಯೊಂದಿಗೆ ತಕ್ಷಣ ಕಳುಹಿಸಲು ಕೋರುತ್ತೇವೆ.

ಡಿ. ಮಂಜುನಾಥ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ.

*ದೂರವಾಣಿ : 9449552795 ಇವರಿಗೆ ತಲುಪಿಸಲು ಕೋರುತ್ತೇವೆ.

 ಜನವರಿ ೧೬ ರಂದು ರಾಜ್ಯಮಟ್ಟದ ಸಮ್ಮೇಳನ ನಡೆಯಲಿದೆ. ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಭಾಂಗಣದಲ್ಲಿ ನಡೆಯಲಿದೆ. ಭಾಗವಹಿಸುವವರಿಗೆ ಊಟ, ತಿಂಡಿ, ವಸತಿ ವ್ಯವಸ್ಥೆ ಮಾಡಲಾಗುವುದು. ಸಂಪರ್ಕ ಮಾಡಲು ಕೋರಿದೆ.*

ಶಿವಮೊಗ್ಗ ತಾಲ್ಲೂಕು  ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ೧೧ ರಂದು ಶನಿವಾರ ಆಲ್ಕೋಳ ವೃತ್ತದ ಸಮೀಪವಿರುವ ಸ್ಯಾನ್ ಜ್ಯೋಸ್ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ.

 ಅದೇ ರೀತಿ ಬೇರೆ ಬೇರೆ ತಾಲ್ಲೂಕು ಗಳಲ್ಲಿ ಸಮ್ಮೇಳನ ನಡೆಯಲಿದೆ. ಜಿಲ್ಲಾ ಮಟ್ಟದ ಮಕ್ಕಳನ್ನು ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 13 ರಂದು ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಡಿ. ಮಂಜುನಾಥ ವಿವರಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!