ಹೊಸನಗರ: ಪತ್ನಿಯ ರಕ್ತ ಪರೀಕ್ಷೆ ವರದಿಯನ್ನು ವೈದ್ಯೆ ಒರ್ವಳಿಗೆ ತೋರುಸಲು ಹೋದ ಸಂದರ್ಭದಲ್ಲಿ ವೈದ್ಯೆ ಏಕಾಂಗಿಯಾಗಿ ಇರುವುದನ್ನು ಗಮನಿಸಿದ ವ್ಯಕ್ತಿಯೋರ್ವ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೋದೋರು (ಕಾನ್ ಬೈಲ್) ರವಿಗೌಡ ಎಂಬಾತ ತನ್ನ ಪತ್ನಿಯ ರಕ್ತ ಪರೀಕ್ಷೆ ವರದಿಯನ್ನು ವೈದ್ಯೆಗೆ ತೋರಿಸಲು ಡಿಸೆಂಬರ್ 29ರಂದು ಹೋದಾಗ ವೈದ್ಯೆ ಏಕಾಂಗಿ ಇರುವುದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ತಕ್ಷಣ ಎಚ್ಚೆತ್ತ ವೈದ್ಯೆಯು ಆತನಿಗೆ ಬೈದು ಮನೆಯಿಂದ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಮಾನಸಿಕ ಒತ್ತಡದಿಂದ ಹೊರ ಬಂದು ಡಿಸೆಂಬರ್ 31ರಂದು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.