ಶಿವಮೊಗ್ಗ,ಜ.೨: ಮಾಜಿ ನಗರಸಭೆ ಸದಸ್ಯ ಹಾಗೂ ತರಕಾರಿ ಸತ್ಯನಾರಾಯಣ ಅವರು ಡೆತ್ ನೋಟ್ ಬರೆದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣವೆಂದು ತಿಳಿದು ಬಂದಿದೆ.
ಆರೋಗ್ಯವಾಗಿದ್ದ ಮಾಜಿ ಕಾರ್ಪರೇಟರ್ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಂದು ಸಂಜೆ ೫-೩೦ ಕ್ಕೆ ಈ ಘಟನೆ ಬೆಳಕಿಗೆ ಬಂದಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವ ಡೆತ್ ನೋಟ್ ಬರೆದು ಈ ಘಟನೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸತ್ಯನಾರಾಯಣ್ ಅವರು ತರಕಾರಿ ಸತ್ಯನಾರಾಯಣ ಎಂದೇ ತಮ್ಮ ರಾಜಕೀಯ ಜೀವನದಲ್ಲಿ ಗುರುತಿಸಿಕೊಂಡಿದ್ದರು. ೭೪ ವರ್ಷದ ಮಾಜಿ ಕಾರ್ಪರೇಟರ್ ಆತ್ಮಹತ್ಯೆ ಕುಟುಂಬಸ್ಥರಲ್ಲಿ ತುಂಬಲಾಗದ ದುಖ ಆವರಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ತರಕಾರಿ ಸತ್ಯನಾರಾಯಣ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದು ಕಡಿಮೆಯಾಗಿತ್ತು. ಶ್ರೀಯುತರಿಗೆ ಮೂವರು ಮಕ್ಕಳಿದ್ದು ಒಬ್ಬರು ಸರ್ಕಾರಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಮತ್ತೋರ್ವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೋರ್ವರು ಉದ್ಯಮಿಯಾಗಿದ್ದಾರೆ.
ವಿನೋಬ ನಗರದ ವಾಟರ್ ಟ್ಯಾಂಕ್ ಬಳಿ ಇವರ ಮನೆಯಿದೆ. ಇದೇ ಮನೆಯಲ್ಲಿ ಮಾಜಿ ಕಾರ್ಪರೇಟರ್ ಸಾವನ್ನಪ್ಪಿದ್ದಾರೆ. ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.