ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆತಯ ಹೆರಿಗೆ ವಾರ್ಡ್ ನ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಪತ್ತೆಯಾದ ಘಟನೆ ವರದಿಯಾಗಿದೆ.
ಆಸ್ಪತ್ರೆ ಡಿ ಗ್ರೂಪ್ ಸಿಬ್ಬಂದಿಯೋರ್ವರು, ರಾತ್ರಿ ಶೌಚಾಲಯ ಕೊಠಿಡಿಗೆ ತೆರಳಿದ್ದ ವೇಳೆ ಕಮೋಡ್ ನಲ್ಲಿ ಭ್ರೂಣ ಪತ್ತೆಯಾಗಿದೆ. ಭ್ರೂಣ ಸರಿಸುಮಾರು 7 ತಿಂಗಳ ವಯೋಮಾನದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಮೆಗ್ಗಾನ್ ಸಿಬ್ಬಂದಿಗಳು ಹಾಗು ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಯ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.