,
ಸಾಲವನ್ನು ವಾಪಸ್ ಕೊಡದೆ ಇದ್ದಾಗ, ಅದಕ್ಕೆ ದಾಖಲೆಗಳಿಲ್ಲದೆ ಇದ್ದರೆ ನಂಬಿಕೆಯ ಮೇಲೆ ಕೊಟ್ಟಿದ್ದ ವ್ಯಕ್ತಿ ನ್ಯಾಯಾಲಯಕ್ಕೂ ಹೋಗಲಾಗದೇ, ಪೊಲೀಸ್ ಠಾಣೆಯಲ್ಲಿ ಮಾತನಾಡಲಾಗದೆ ಕೊನೆಯ ಹಂತವಾಗಿ ದೇವರ ಮುಂದೆ ತನ್ನ ಅಹವಾಲು ಕೇಳಿಕೊಳ್ಳುವುದು ವಾಡಿಕೆ.
ಭಗವಂತ ಇಲ್ಲಿ ಹಣ ಕೊಡಿಸುತ್ತಾನೋ, ಶಿಕ್ಷಿಸುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮಲ್ಲಿ ನಾವು ನಂಬುವ ಎಲ್ಲದಕ್ಕಿಂತ ಮುಖ್ಯವಾದದ್ದು ನಮ್ಮ ನಡುವಿನ ಜೀವಾತ್ಮದ ಭಗವಂತ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ಮನಸಾಕ್ಷಿ ಮಾರಿಕೊಂಡನಿಗೆ ಕೊಟ್ಟವನು ಇಲ್ಲಿ ಕೋಡಂಗಿಯಾಗುವು ಅನಿವಾರ್ಯ ಎಂಬಂತೆ ಅತ ಭಗವಂತನ ಮೊರೆ ಹೋಗುತ್ತಾನೆ.
ಇಂತಹ ಎಷ್ಟೋ ಘಟನೆಗಳು ಅಲ್ಲಿಯೇ ಬಗೆಹರಿದಿದ್ದಾವೆ. ಅದೆಷ್ಟು ಕಡೆ ಮುಟ್ಟಿ ನೋಡುಕೊಳ್ಳುವಂತಹ ಶಿಕ್ಷೆಯಾಗಿದೆ. ಇದು ನಮ್ಮ ನಮ್ಮ ನಂಬಿಕೆ ಮೇಲೆ ನಿರ್ಧಾರವಾಗಿರುತ್ತದೆ ಅಲ್ಲವೇ?
ಜಗಳವೇಕೆ? ಸ್ನೇಹದ ಬದುಕು ಮುಖ್ಯವಲ್ವೇ?
ನಗುವೆ ಹಾಗೆ ಅಪರೂಪಕ್ಕೆ ಬರುವ ನೆಂಟರಂತೆ. ನೋವು ದಿನವೂ ಬರುವ ಅಥಿತಿಯಂತೆ. ಕೆಲವು ಸಲ ನಾವೆಷ್ಟು ಖುಷಿ ಖುಷಿಯಿರಬೇಕೆಂದು ತಿಳಿದರೂ ಯಾರದೋ ವಿಷಯಕ್ಕೆ ಮನಸ್ತಾಪ ಜಗಳ.
ಏಕೋ ಒಮ್ಮೊಮ್ಮೆ ಅನಿಸುತ್ತೆ ಮಾತು ಬಾರದವನಿಗೆ ಜಗಳವಿಲ್ಲವೆಂದು. ನಿಮ್ಮನ್ನು ತುಂಬಾ ನೋಯಿಸುವರಿದ್ದರೆ, ಅಂತಹವರಿಂದ ದೂರವಿರಿ
ಕೆಲವರು ಅದೆಷ್ಟು ದೊಡ್ಡ ವ್ಯಕ್ತಿಯಿರಲಿ ಅವರ ಸ್ನೇಹ ಹಾಗೂ ಅಂತವರ ಸಹಾಯ ಪಡೆಯಬೇಡಿ. ಒಂದು ಸಹಾಯ ಮಾಡುವ ನೆಪದಲ್ಲಿ ನೂರು ಸಲ ನಿಮ್ಮ ಮನಸ್ಸು ನೋಯಿಸಬಹುದು. ನಿಜಕ್ಕು ತುಂಬಾ ಆತ್ಮಿಯ ಸ್ನೇಹಿತರಾದರೆ, ಮಾತ್ರ ತುಂಬಾ ನೋವಾದರೆ ಹಂಚಿಕೊಳ್ಳಿ. ಎದುರು ಸಿಕ್ಕು ನಕ್ಕು ಮಾತಾಡಿದರೆಂದು ನೋವು ಹಂಚಿಕೊಳ್ಳಬೇಡಿ, ಅವರಿಂದ ನಿಮಗೆ ನೋವು ತಪ್ಪಿದ್ದಲ್ಲ. ಪ್ರೀತಿಸುವರನ್ನು ಎಷ್ಟು ಪ್ರೀತಿಸುತ್ತೀರೋ, ದ್ವೇಷಿಸುವರನ್ನು ಸಣ್ಣ ಪ್ರಮಾಣದಲ್ಲಿ ಸದಾ ದ್ವೇಷಿಸುತ್ತೀರಿ. ಮತ್ತೆ ಅವರು ನಿಮ್ಮೊಂದಿಗೆ ಸ್ನೇಹಿತರಂತೆ ನಟಿಸಿ ನಿಮಗೆ ಮತ್ತಷ್ಟು ನೋವು ಕೊಡಬಹುದು. ಅದೇ ಸ್ನೇಹಿತರು ಯವುದೋ ಬೇಜಾರಲ್ಲಿ ಒಂದು ಮಾತಾಡಿದರೆ ಸಹಿಸಿಕೊಳ್ಳಿ. ಅವರು ಸದಾ ನಿಮ್ಮ ಒಳಿತನ್ನೆ ಬಯಸುತ್ತಾರೆ. ನಿಮ್ಮ ನೋವಿಗೆ ಸ್ಪಂದಿಸುತ್ತಾರೆ. ಜೀವನದಲ್ಲಿ ಒಬ್ಬರಾದರೂ ಪ್ರಾಣ ಸ್ನೇಹಿತರು ಇರಬೇಕು. ಅವರು ಪ್ರೀತಿಯಿಂದ ಗದರುವ ಅಣ್ಣನಂತೆ, ಬುದ್ದಿ ಹೇಳುವ ಅಪ್ಪನಂತೆ, ಪ್ರೀತಿ ತೋರಿಸುವ ಮಮತಾಮಯಿ ತಾಯಿಯಂತೆ ಇದ್ದ ಸ್ನೇಹಿತರನ್ನ ಎಂದೂ ಮರೆಯದಿರಿ. ನಿಜವಾದ ಸ್ನೇಹ ಅಮರ.
ನಮ್ಮ ಇರುವಿಕೆ ಇಲ್ಲದಿದ್ದರೂ ಸದಾ ತಮ್ಮ ಮನಸ್ಸಿನಲ್ಲಿ ಒಂದು ಸ್ಥಾನ ಕೊಟ್ಟು ಆರಾಧಿಸುವುದು ಕೇವಲ ಸ್ನೇಹಿತರು ಮಾತ್ರ ಅಲ್ವಾ ?.
(ವಾಟ್ಸಪ್ ಬರಹ)