ಶಿವಮೊಗ್ಗ ಡಿ.20:: ನಗರದ ಸಂಚಾರಿ ಪಶ್ಚಿಮಠಾಣೆ ಪೊಲೀಸರು ನಂಬರ್ ಪ್ಲೇಟ್ ಹಾಕದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ನಿನ್ನೆ ವಿಶೇಷ ಅಭಿಯಾನದ ಮೂಲಕ ವಶಕ್ಕೆ ಪಡೆದಿದ್ದಾರೆ.
ಪಶ್ಚಿಮ ಸಂಚಾರಿ ಠಾಣೆಯ ಸಬ್ಇನ್ಸ್ಫೆಕ್ಟರ್ ತಿರುಮಲೇಶ್ ನೇತೃತ್ವದಲ್ಲಿ ಈ ಕಾರ್ಯಚಾರಣೆ ನಡೆಸಿದ್ದು, 50 ವಾಹನ ಸವಾರರಿಂದ ಸುಮಾರು 25 ಸಾವಿರ ದಂಡ ವಸೂಲಿ ಮಾಡಲಾಗಿದೆ.
ನಗರದ ಸಾರ್ವಜನಿಕರಿಗೆ ಅವರು ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವುದು ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. ಮತ್ತು ಅನಾಹುತಗಳಿಗೆ ಕಾರಣವಾಗಿದ್ದು, ಅಪಫಾತದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ
ರೀತಿಯ ಕಾನೂನಾತ್ಮಕ ನೆರವುಗಳು ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದು, ನಿನ್ನೆಯ ಅಭಿಯಾನದಲ್ಲಿ ನಿಯಮ ಉಲ್ಲಂಘಿಸಿದ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.