ಶಿವಮೊಗ್ಗ ಡಿ.17 :ಹೊಸನಗರ: ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ ವಿಶ್ವನಾಥ್ ಮೇಲೆ ವ್ಯಕ್ತಿಯೊರ್ವ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಠಾಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ನಿಟ್ಟೂರು ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ನಾಗೋಡಿ ವಿಶ್ವನಾಥ್ ಎಂಬುವವರ ಮೇಲೆ ಬಿಜೆಪಿ ಕಾರ್ಯಕರ್ತ ದೇವರಾಜ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಬಗ್ಗೆ ಪಿರ್ಯಾದಿ ವಿಶ್ವನಾಥ ನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ
ನಿಟ್ಟೂರು ಗ್ರಾಮದ ರಸ್ತೆ ಬದಿಯಲ್ಲಿ ನಿಂತಿದ್ದ ಆರೋಪಿ ದೇವರಾಜ್, ಬೈಕ್ ನಲ್ಲಿ ಹೋಗುತಿದ್ದ ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ ವಿಶ್ವನಾಥ್ ಎಂಬಾತನನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ ಸಾರ್ವಜನಿಕರು ನಿಟ್ಟೂರು ಗ್ರಾಮವು ಶಿವಮೊಗ್ಗ ಜಿಲ್ಲೆಯ ಕೊನೆಯ ಗ್ರಾಮವಾಗಿದೆ. ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಸುಮಾರು 4-5 ವರ್ಷಗಳ ಹಿಂದಷ್ಟೇ ದೇವರಾಜ ಎಂಬಾತ ನಾಮಕಾವಸ್ಥೆಗೆ ಒಂದು ತರಕಾರಿ ಅಂಗಡಿ ನಡೆಸುತ್ತಿದ್ದು ಈ ಭಾಗದ ಮುಗ್ಧ ಹಳ್ಳಿ ಜನರಿಗೆ ಹೆದರಿಸಿ ಬೆದರಿಕೆ ಹಾಕುವುದು ನಿತ್ಯ ಕಾಯಕವಾಗಿದೆ. ಈತನ ವಿರುದ್ಧ ಜನ ಸಾಮಾನ್ಯರು ಠಾಣೆಗೆ ಬಂದು ದೂರು ನೀಡಲು ಹೆದರುತ್ತಿದ್ದು, ಅನೇಕ ಬಾರಿ ಗಲಭೆ ಮಾಡಿದರು ಸಹ ಈತನ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೆ, ಜನತೆ ಸಹ ಯಾವುದೇ ದೂರು ನೀಡಲು ಮುಂದೆ ಬರೆದೇ ಇರುವುದು ಮುಗ್ದಜನರ ಆತಂಕಕ್ಕೆ ಕಾರಣ. ಈತನು ತಾನು ಪ್ರಭಾವಿ ನನ್ನ ಹತ್ತಿರ ಹಣವಿದೆ, ತೋಳಬಲವಿದೆ, ನನ್ನನ್ನು ಯಾರು ಸಹ ಏನು ಮಾಡಲು ಆಗುವುದಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದು ಈತನ ದಬ್ಬಾಳಿಕೆ, ದೌರ್ಜನ್ಯಕ್ಕೆ ಸಂಪೂರ್ಣ ನಿಟ್ಟೂರು ಪಂಚಾಯ್ತಿ ಜನರು ಹೆದರಿ ಬದುಕುವಂತಹ ಪರಿಸ್ಥಿತಿ ಇದ್ದು, ಇದೇ ರೀತಿ ನಿನ್ನೆ ದಿ:
ಇದೇ ಡಿ.15ರ ಸೋಮವಾರ ಹಾಡುಹಗಲೆ ಜನಸಂದಣಿ ಜಾಗದಲ್ಲೆ ಪ್ರತಿಷ್ಠಿತ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಏಕಾಏಕಿ ದೌರ್ಜನ್ಯ ತೋರಿ, ಹಲ್ಲೆ ಮಾಡಿ ದರ್ಪ ಮೆರೆದಿರುವುದು ಆತನ ಆಟಾಟೋಪಕ್ಕೆ ಹಿಡಿದ ಕೈಗನ್ನಡಿ ಎನ್ನಲಾಗಿದೆ.
ಈ ಕುರಿತು ಸೂಕ್ತ ಕ್ರಮಕೈಗೊಳ್ಳದೆ ಇದ್ದಲ್ಲಿ ನಿಟ್ಟೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಈತನಿಂದ ದೊಡ್ಡ ಅನಾಹುತವೇ ಸಂಭವಿಸುವುದರಲ್ಲಿ ಅನುಮಾನ ಇರುವುದಿಲ್ಲ. ಈತನ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ವೇಳೆ ತಾಲೂಕು ಕೆಡಿಪಿ ಸದಸ್ಯ ನಾಗೇಂದ್ರ ಜೋಗಿ , ಗ್ರಾಮ ಪಂಚಾಯತಿ ಸದಸ್ಯ ಅಶೋಕ್ ಕುಂಬ್ಳೆ , ಶೋಭಾ ಉದಯ್ , ರಾಘವೇಂದ್ರ ಆಚಾರ್ ,ಪ್ರಮುಖರಾದ ಸತ್ಯನಾರಾಯಣ ಕೊಳಕಿ , ಮಂಜಪ್ಪ ಬೆನ್ನಟ್ಟೆ ,ರವಿ ಚನ್ನಪ್ಪ ಮೊದಲಾದವರು ಇದ್ದರು.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.