ಶಿವಮೊಗ್ಗ : ನಾಳೆ ಶಿವಮೊಗ್ಗ ಬಸವೇಶ್ವರ ಕೋ ಆಪರೇಟೀವ್ ಸೊಸೈಟಿ ಚುನಾವಣೆಯ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಎರಡು ಕಡೆ ಅರ್ಜಿ ಹಾಕಿರುವ ಅಭ್ಯರ್ಥಿ ಬಗ್ಗೆ ತುಂಬಾ ಗಂಭೀರ ಚರ್ಚೆ ನಡೆದಿದೆ.
ಹಿಂದುಳಿದ ವರ್ಗಗಳ ಕೋಟಾದಡಿ ಇಬ್ಬರು ಅರ್ಜಿ ಸಲ್ಲಿಸಿದ್ದು, ಅದರಲ್ಲಿನ ಓರ್ವರು ಹಿಂದುಳಿದ ವರ್ಗ ಮತ್ತು ಸಾಮಾನ್ಯ ಹೆರಿನಲ್ಲಿ ಅರ್ಜಿ ಸಲ್ಲಿಸಿದ್ದರು.
ಪಾಪ ಎಂಬಂತೆ, ಇರುವ ಆ ಅಭ್ಯರ್ಥಿ ಗೆಲ್ಲಲೇಬೇಕೆಂದು ಈಗ ಒಬಿಸಿ ಬಿಟ್ಟು ಸಾಮಾನ್ಯದಲ್ಲೇ ಮಾಮೂಲಿ ಓಟು ತಗೊಂಡು ಗೆಲ್ತೀನೆಂದು ಒಬಿಸಿ ಅರ್ಜಿ ವಜಾ ಮಾಡಿಸಲು ಯತ್ನಿಸಿದ್ದಾರೆ.
ಚುನಾವಣಾ ನಿಯಮದ ಪ್ರಕಾರ ಮೊದಲ ಅರ್ಜಿ ಉಳಿಯಬೇಕು, ತಪ್ಪಾದ್ರೆ ಎರಡನೆಯದಕ್ಕೆ ಆದ್ಯತೆ. ಆದರೆ ಎರಡೂ ಕಡೆ ಹಾಕುವಂತಿಲ್ಲ. ತಪ್ಪಾಗಿದ್ದರೆ ತಿದ್ದಿಕೊಳ್ಳಲು ಅಲ್ಲಿಯೇ ಹಾಕಬೇಕಷ್ಟೇ. ಆದರೆ ಮೊದಲ ಪ್ರಯತ್ನದ ವರ್ಗವೇ ಉಳಿಯೋದು.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯುತ್ತಿದ್ದು, ಸಹಕಾರ ಸಂಘಗಳ ನೊಂದಣಿ ಇಲಾಖೆಗೆ ಇದು ಕಗ್ಗಂಟಿನ ಪ್ರಶ್ನೆಯಾಗಿದೆ ಎಂದು ತಿಳಿದು ಬಂದಿದೆ.
ದೊಡ್ಡವರ ಒತ್ತಡ ಇಲ್ಲಿ ಕೆಲಸ ಮಾಡುತ್ತಾ? ಕಾನೂನು ಪಾಲನೆ ಆಗುತ್ತಾ? ಕಾದು ನೋಡುವ ಸ್ಕೀಮಲ್ಲಿ ತುಂಗಾತರಂಗ ಕಾಯ್ತಿದೆ.