“
ವಾರದ ಅಂಕಣ- 24
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ನಮ್ಮ ನಡುವಿನ ಈ ಸಮಾಜ ಎಷ್ಟೊಂದು ಸ್ವಚ್ಛಂದವಾಗಿದೆ. ಅದೆಷ್ಟೊಂದು ಪ್ರೀತಿ, ವಿಶ್ವಾಸ, ಆದರ, ಪರಸ್ಪರ ನಮ್ಮ ನಡುವಿನ ಹೊಂದಾಣಿಕೆ ಹೊಂದಿದೆ ಅಲ್ಲವೇ?. ಆದರೆ ಇದರ ನಡುವಿನ ಕೆಲವೇ ಕೆಲವು ಸಣ್ಣ, ಸಣ್ಣ ಮನಸ್ಸನ್ನು ಹೊಂದಿರುವ ವಿಚಿತ್ರ ವ್ಯಕ್ತಿಗಳಿಂದ ಬಹು ಸಂಖ್ಯೆಯಲ್ಲಿರುವ ಮುಗ್ಧ ನಿಷ್ಕಲ್ಮಶ ಮನಸ್ಸುಗಳು ಹಿಂಸೆ ಪಡುತ್ತಿವೆ. ಒಟ್ಟಾರೆ, ಕೆಲವರು ಕಂಡೋರ ಮನ ಹಾಗೂ ಮನೆಯಲ್ಲಿ ಒಲೆ ಹಚ್ಚಿಕೊಂಡು ಅಡಿಗೆ ಮಾಡಿ ಊಟ ಮಾಡುತ್ತಾರೆ ಎಂಬುದೇ ಈ ವಾರದ ನಮ್ಮ ನಡುವಿನ ಅತಿ ಚಿಕ್ಕ ಸಂಖ್ಯೆಯ ವ್ಯಕ್ತಿಗಳ ಆಟವೇ ನೆಗೆಟಿವ್ ಥಿಂಕಿಂಗ್ ವಿಷಯ.
ಸದಾಕಾಲ ಒಳ್ಳೆಯ ಯೋಚನೆ ಮಾಡುತ್ತಾ ಮುಕ್ತ ಮನದಲ್ಲಿ ಬದುಕು ಸಾಗಿಸುವ ನಮ್ಮ ನಡುವಿನ ಈ ನಂಬಿಕೆಯ ಪ್ರೀತಿಯ ಸಂಸಾರ ಸಾಗರದಲ್ಲಿ ಕೆಲವು ನಾಟಕೀಯ ಮನಸುಗಳು ಅನ್ಯ ಮನ ಹಾಗೂ ಮನೆಯಲ್ಲಿ ತಮ್ಮ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುತ್ತಾರೆ ಅಲ್ಲವೇ? ಈ ನಡುವಿನ ಬಹಳಷ್ಟು ಮನಸುಗಳು ಪಾಸಿಟಿವ್ ವಿಷಯಗಳನ್ನು ಮರೆತು ನಕಾರಾತ್ಮಕ ಚಿಂತನೆ ಬೆಳೆಯುವಂತೆ ಮಾಡಿರುವುದು ಬೆರಳೆಣಿಕೆಯ ಕೆಲವರ ಕುಕೃತ್ಯ ಎಂದರೆ ತಪ್ಪಾಗಲಿಕ್ಕಿಲ್ಲ.
ಪುಕ್ಸಟ್ಟೆ ಅಯ್ಯೋ ಪಾಪ ಅನ್ಬೇಡಿ, ಯಾರೇ ಆಗಲಿ ತುಂಬಾ ಹಚ್ಕೋಬೇಡ್ರಿ, ಗುಮ್ಮಣ್ಣಗೋಸ್ಕರರ ಸಾವಾಸ ಬ್ಯಾಡ್ರಿ, ಹಣ ಮಾಯೆನಾ?, ಸಮಾಜ ಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ ಎಚ್ಚರ, ಒಳ್ಳೆಯವರಾದರೆ ನಾಕಾಣೆ ಸದಾ ಸಿಗೋಲ್ಲ, ನಂಬಿಕೆ ದ್ರೋಹದ ಮನಸ್ಸುಗಳೇ ಹೊಲಸು, ಕೆಟ್ಟ ಕಣ್ಣುಗಳಿಂದ ದೂರ ಇರಿ, ಹಣದ ಲಾಲಾಸೆಗೆ ರಾಜಕಾರಣ, ಸಂಪನ್ನರನ್ನು ಕೆಣಕಬೇಡಿ,
ಅತಿಯಾದ ತಾಳ್ಮೆ ಆತಂಕ ತಂದೀತು ಜೋಕೆ, ಬದುಕಿಗಾಗಿ ಮನಸ್ಸಿಗೆ ತೇಪೆ ಬೇಕೆ?, ತೀರ ಜಾಸ್ತಿ ಸಲಿಗೆ ಸದರ ಬ್ಯಾಡ್ರಿ, ರಾಜಿ ಪಂಚಾಯ್ತಿ ಎಂಬುದೇ ನಾಟಕ, ಇವನು ಆತ್ಮೀಯ ನಂಬಿಕಸ್ಥ ಎಂದು ತಿಳಿದುಕೊಳ್ಳಲು ನಾಕಾಣೆ ಸಾಲ ಕೊಡ್ರಿ, ಬಡ್ಡಿ ದಾಖಲೆ ಇಲ್ದೆ ಸಾಲ ಕೊಟ್ರೆ ನೀವೇ ಬಡ್ಡಿ ಕೊಡಬೇಕಾಗುತ್ತದೆ, ಈ ನಮ್ ಜನ ಸೂಕ್ಷ್ಮ ಅದಾಗಲೇ ಹೆಚ್ಚಿದ್ದು ಮೋಸಗಾರತನ, ಯಾವಾಗಲೂ ಕೈಲಿ ಕಾಸಿಲ್ಲ ಅನ್ಬೇಡ್ರಿ, ಎಕ್ಕುಟ್ ಹೋಯ್ತು ಹೊಟ್ಟೆ ಯಾಕೆ ಗೊತ್ತಾ?, ಹಾರ್ಟ್ ಇದ್ದೋರಿಗೆ ಅಷ್ಟೇ ಅಟ್ಯಾಕಾ? ಸಣ್ಣ ಮಕ್ಕಳಿಗೂ ಅಟ್ಯಾಕ್ ಯಾಕ್ರಿ,, ದುಡಿದು ಚೆಲ್ಲಬೇಕು- ಚೆಲ್ಲುವಾಗ ನಮ್ಮ ಎಚ್ಚರಾವಸ್ತೆ ಇರಬೇಕು, ಕೆಲವರಿಗೆ ಹಣ ಕೊಟ್ರೆ ಶನಿ ಬೆನ್ನತ್ತುತ್ತಾನ್ರಿ, ಇಂತಹ ಅಂಕಣಗಳ ಮೂಲಕ ನಮ್ಮ ನಡುವಿನ ಕೆಲ ವಿಕೃತ ಮನಸ್ಸುಗಳನ್ನು ಪದಗಳ ಮೂಲಕ ಅಂಕಣಗಳ ಮೂಲಕ, ವಾಸ್ತವಗಳ ಮೂಲಕ ಬದುಕಿನ ಪ್ರತಿಘಟ್ಟಗಳಲ್ಲಿ ಆಗುತ್ತಿರುವ ವಿಷಯ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ಒಳ್ಳೆಯ ಮನಸ್ಸು, ಸದಾ ಸಂಪನ್ನ ಆಗಿರುತ್ತದೆ ಯಾವಾಗಲೂ ಸಕಾರಾತ್ಮಕ ಚಿಂತನೆಗಳು ಇರುತ್ತವೆ. ಆದರೆ ನಮ್ಮ ನಡುವಿನ ವಿಕಾರಾತ್ಮಕ ಮನಸ್ಸುಗಳಿಂದ ಇಂತಹ ತೀರಾ ಅನಿಷ್ಠದ ವಿಕಾರಾತ್ಮಕ ಯೋಚನೆಗಳು ಸುಳಿದಾಡುವಂತೆ ಮಾಡುತ್ತಿದೆ. ನಾನು ದೊಡ್ಡ ಅಧಿಕಾರಿ ನನ್ನ ಕೈ ಕೆಳಗಿರುವವರು ನನ್ನ ಎಲ್ಲಾ ಮಾತುಗಳನ್ನು ಕೇಳಬೇಕು ಎನ್ನುವುದನ್ನು ಒಂದೆಡೆ ಸರಿ ಎನ್ನುವುದಾದರೆ, ಅವರವರ ಲೆಕ್ಕಾಚಾರಗಳ ನಡುವೆ ಕೈ ಕೆಳಗಿನವರನ್ನು ಸಹ ಒಳ್ಳೆಯ ಮನ ಹಾಗೂ ಪ್ರೀತಿಯಿಂದ ಅವರ ತಪ್ಪುಗಳನ್ನು ತಿದ್ದಿ, ಸರಿಗಳನ್ನು ಬೆಂಬಲಿಸಿ, ಬೆನ್ತಟ್ಟುವ ಮೂಲಕ ಗೌರವಿಸುವುದನ್ನು ಕಲಿಯಬೇಕಲ್ಲವೇ? ಅಧಿಕಾರ, ಅಂತಸ್ತು ಎಂಬುದು ಅಹಂಕಾರವಾಗಬಾರದು. ಸಮಾಜದ ಒಂದು ತಿಳುವಳಿಕೆ ಎಂದರೆ ಬೇರೆಯವರ ಮನೆಯನ್ನು ಹಾಳು ಮಾಡುವುದಲ್ಲ, ಅದನ್ನು ಕಟ್ಟಿಕೊಡಲಾಗದಿದ್ದರೆ ಸುಮ್ಮನಿದ್ದು ಬಿಡಿ. ಕಂಡವರ ವಿಷಯದಲ್ಲಿ, ಕಂಡೋರ ಬದುಕಲ್ಲಿ ಕೈ ಆಡಿಸಬೇಡಿ. ನಿಮ್ಮ ಕೈ ಮುಂದೊಂದು ದಿನ ನಿಮ್ಮ ಹತ್ತಿರ ಇರುವುದೇ ಎಂಬ ಪ್ರಶ್ನೆ ಸಾಕಷ್ಟು ಜನರ ನಡುವೆ ಕೇಳಿ ಬರುತ್ತಿದೆ, ಮಾತನಾಡುತ್ತಾರೆ ಮೋಸಕ್ಕೆ ತಿರುಗೇಟು ನೀಡುತ್ತಾರೆ.
(ಮುಂದುವರೆಯುತ್ತದೆ)