ತೀರ್ಥಹಳ್ಳಿ,ಡಿ.12:
ಮoಡಗದ್ದೆ ಸಿ ಆರ್ ಪಿ ಕ್ಲಸ್ಟರ್ ಕೇಂದ್ರ ದ ಬಲವರ್ಧನೆಗೆoದು ಅಧಿಕ ಮೊತ್ತದ ಹಣವನ್ನು ಸಾರ್ವಜನಿಕರಿoದ ಕ್ಲಸ್ಟರ್ ನ ಶಿಕ್ಷಕರಿoದ ಸಂಗ್ರಹಿಸಿರುವುದರ ಬಗ್ಗೆ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು ಅದು ದುರುಪಯೋಗವಾದ ಬಗ್ಗೆ ದೂರು ನೀಡಿ ಆರು ತಿಂಗಳಾದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ಧೋರಣೆಯನ್ನು ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾಡುತ್ತಿದ್ದಾರೆಂದು ಕರ್ನಾಡಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ ಆರೋಪಿಸಿದ್ದಾರೆ.

ಈ ಬಗ್ಗೆ ಮoಡಗದ್ದೆ ಸಿ ಆರ್ ಪಿ ಇಲಾಖಾ ಅನುಮತಿ ಪಡೆದಿರುವುದಿಲ್ಲ ಎಂಬುದು ತಿಳಿದು ಬoದಿದ್ದು, ಸಿ ಆರ್ ಪಿ ರವರು ಕಳೆದ ಜೂನ್ ತಿಂಗಳಿನಲ್ಲಿ ಇನ್ನೊರ್ವ ಶಿಕ್ಷಕಿಯ ಮೇಲೆ ಅನಾವಶ್ಯಕವಾಗಿ ಶಿಕ್ಷಕರ ವಾಟ್ಸಪ್ ಗುಂಪಿನಲ್ಲಿ ಅಶ್ಲೀಲಕರ, ಅವಮಾನಕರ ಮೆಸೆಜ್ ಮಾಡಿರುವ ಬಗ್ಗೆ ನೊಂದ ಶಿಕ್ಷಕಿ ಹಾಗೂ ದಲಿತ ಸoಘರ್ಷ ಸಮಿತಿ ಹಲವಾರು ಬಾರಿ ದೂರು ನೀಡಿದರೂ ಸಿ ಆರ್ ಪಿ ರವರ ಮೇಲೆ ಈವರೆಗೂ ಅವರ ದುರ್ವರ್ತನೆಯ ಬಗ್ಗೆ ಶಿಸ್ತು ಕ್ರಮ ಜಾರಿಯಾಗಿರುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಮoಡಗದ್ದೆ ಸಿ ಆರ್ ಪಿ ರವರ ದುರ್ವರ್ತನೆ ಮಿತಿಮೀರಿದ್ದು, ದಬ್ಬಾಳಿಕೆ, ಹಣ ಸಂಗ್ರಹ ಮಾಡಿ ದುರುಪಯೋಗ, ಅಶ್ಲೀಲ ಪದ ಬಳಕೆ , ಕೊಲೆ ಬೆದರಿಕೆಯoಥಹ ಮೆಸೆಜ್ ಗಳನ್ನು ವಾಟ್ಸಪ್ ನಲ್ಲಿ ಹಾಕಿದ್ದು ಅವರ ಮೇಲೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಪುರುಷ ಶಿಕ್ಷಕರನ್ನು ಹೆದರಿಸುವುದು ಇತ್ಯಾದಿ ದುರ್ವರ್ತನೆ ಕಂಡು ಬoದಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಈ ಪ್ರಕರಣ ಆರು ತಿಂಗಳಿನಿಂದ ಶಿಕ್ಷಣ ಇಲಾಖೆಯ ಗಮನದಲ್ಲಿದ್ದರೂ, ಅವರ ಮೇಲೆ ಶಿಸ್ತುಕ್ರಮ ಜರುಗಿಸದೆ ನಿರ್ಲಕ್ಷತನ ಪಕ್ಷಪಾತ ಧೋರಣೆ ಮಾಡುತ್ತಿರುವುದು ನೋಡಿದರೆ ತೀರ್ಥಹಳ್ಳಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಆಡಳಿತದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ

ಯಿಲ್ಲವೆoಬುದು ಎದ್ದು ಕಾಣುತಿದೆ. ಅಲ್ಲದೆ ಕೆಡಿಪಿ ಸಭೆಯಲ್ಲಿ ಸಿ ಆರ್ ಪಿ ಯವರ ದುರ್ವರ್ತನೆ ಯ ಬಗ್ಗೆ ಪ್ರಶ್ನಿಸಿದಾಗಲೂ ಸಮoಜಸ ಉತ್ತರ ನೀಡದೇ ಸಭೆಗೆ ತಪ್ಪು ಮಾಹಿತಿ ನೀಡಿ ಅಸಹಾಯಕರoತೆ ನಿಂತಿದ್ದು ವಿಷಾದನೀಯ ಅಲ್ಲವೇ ಎಂದಿದ್ದಾರೆ.
ದಲಿತ ಸಂಘರ್ಷ ಸಮಿತಿ ನೊಂದ ಶಿಕ್ಷಕಿಗೆ ಇನ್ನಿತರ ಶಿಕ್ಷಕರಿoದಲೂ ಕಿರುಕುಳಗಳಾಗಿ ಶಿಕ್ಷಕಿ ಅಧಿಕ ಒತ್ತಡದಿಒದ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶಿಕ್ಷಣ ಇಲಾಖೆ ಸೌಹಾರ್ಧತೆ, ಸಹಕಾರ, ಸಹಬಾಳ್ವೆ ಬೆಳೆಸುವ ಕೇಂದ್ರವಾಗದೆ ಇಲ್ಲಿ ಒಬ್ಬರನ್ನು ತುಳಿದು ಒಬ್ಬರ ಮಾನ ಪ್ರಾಣ ತೆಗೆಯುವ ಷಡ್ಯoತ್ರದ ಕೂಟವೇವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಮoಡಗದ್ದೆ ಸಿ ಆರ್ ಪಿ ಗೆ ಕಾಣದ ಕೈಗಳು ಕುಮ್ಮಕ್ಕು ನೀಡಿ ಈ ಕೃತ್ಯಗಳನ್ನೆಲ್ಲಾ ಮಾಡಿ ಸುತ್ತಿರುವುದು ನಮ್ಮ ಸಮಿತಿಯ ಗಮನದಲ್ಲಿದೆ. ಎಲ್ಲಾ ದಾಖಲೆ ಮಾಹಿತಿಯನ್ನು ಕಲೆ ಹಾಕಿಯೇ ಮoಡಗದ್ದೆ ಸಿ ಆರ್ ಪಿ ಯ ಮೇಲೆ ದೂರು ಬರೆಯಲಾಗಿದೆ. ಸಿ ಆರ್ ಪಿ ರವರ ದುರ್ವರ್ತನೆ ಖಂಡಿಸುತ್ತಾ, ಇವರ ಮೇಲೆ ಸೂಕ್ತ ಶಿಸ್ತು ಕ್ರಮ ಜಾರಿಯಾಗಲೇಬೇಕು ಎಂದು ನಮ್ಮ ಸಮಿತಿ ಆಗ್ರಹಿಸುತ್ತಿದೆ ಎಂದು ಜಿಲ್ಲಾ ಸoಚಾಲಕರಾದ ಎಂ. ಏಳುಕೋಟಿ ರವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.