ಶಿವಮೊಗ್ಗ ನ.೧೮: ಆಧುನಿಕತೆಯ ಅಂಧತ್ವದಲ್ಲಿ ಜನಪದ ಎಂಬ ಅದ್ಭುತ ಕಲೆಗಳು ಕಣ್ಮರೆಯಾಗದಂತೆ ನೋಡಿಕೊಳ್ಳಿ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ ಡಿ.ಮಂಜುನಾಥ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಪುರದಾಳು ಗ್ರಾಮ ಪಂಚಾಯತಿಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಪುರದಾಳು ಕಡ್ಲೆವಡ್ಡು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜನಪದ ಆಟಗಳ ಸ್ಪರ್ಧೆ, ಜನಪದ ಸಂಭ್ರಮ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.

ನಾಡೋಜ ಡಾ. ಎಚ್. ಎಲ್. ನಾಗೇಗೌಡರ ದೂರದೃಷ್ಟಿಯ ಪರಿಣಾಮ ಕರ್ನಾಟಕ ಜಾನಪದ ಪರಿಷತ್ತು ಆರಂಭವಾಯಿತು. ಜನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದರು. ಅವರ ಕನಸಿನ ಮುಂದುವರಿದ ಭಾಗವಾಗಿ ಈ ಕಾರ್ಯಕ್ರಮ ನಡೆದಿದೆ. ಜನಪದರು ಬಿಟ್ಟು ಹೋದ ಕಲೆ, ಆಟಗಳು ಹೊಸತಲೆಮಾರಿಗೆ ತಲುಪಿಸಲು ಅಗತ್ಯ ಪ್ರಯತ್ನದ ಫಲವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಅಂಕಣಕಾರ ಬಿ. ಚಂದ್ರೇಗೌಡ ಅವರು ಮಾತನಾಡಿ, ಅತಿಯಾದ ಇಂಗ್ಲೀಷ್ ಓಲೈಕೆ ನಮ್ಮ ಗ್ರಾಮೀಣ ಭಾಷೆಗಳಿಗೆ ಕುತ್ತು ತಂದಿದೆ. ಕ್ರಿಕೆಟ್ ನಮ್ಮ ಗ್ರಾಮೀಣ ಜನಪದ ಕ್ರೀಡೆಯನ್ನು ಹಾಳುಮಾಡುತ್ತಿದೆ. ಮಕ್ಕಳ ಆಟವನ್ನು ಮೊಬೈಲ್ ಕಿತ್ತುಕೊಂಡಿದೆ. ಮಕ್ಕಳಿಗೆ ಒಳ್ಳೆಯ ಆರೋಗ್ಯ ಬೇಕೆಂದರೆ ಆಟ ಬಹಳ ಮುಖ್ಯ. ಆದರೆ ನಮ್ಮ ಶಾಲೆಗಳು ಆಟವಿಲ್ಲದೆ ಪಾಠ ಪ್ರಧಾನವಾಗಿಸಿದೆ. ಇದು ಮಕ್ಕಳಿಗೆ ಮಾರಕ. ಮೊಬೈಲ್ ನೋಡುತ್ತ ಕಾಲ ಕಳೆಯುತ್ತಿದ್ದ ಜನರಲ್ಲಿ ಇಂತಹ ಜನಪದ ಆಟಗಳು ಒಂದಿಷ್ಟು ಕ್ರಿಯಾಶೀಲವಾಗಿಸಿದೆ ಎಂದರು.

ಗ್ರಾಮ ಪಂಚಾಯತಿ ಸದಸ್ಯರಾದ ಭಾರತಿ ನಾಗರಾಜ್, ವೈ. ಕುಸುಮ, ಮಹೇಶ್ ಹುರುಳಿ, ವೀರಭದ್ರಪ್ಪ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ಪ್ರದೀಪ್ ಎಸ್. ಹೆಬ್ಬೂರ್ ಅಧ್ಯಕ್ಷತೆ ವಹಿಸಿದ್ದರು.
ತೀರ್ಪುಗಾರರಾಗಿ ಟಿ. ಮಂಜಪ್ಪ, ಭೈರಾಪುರ ಶಿವಪ್ಪಮೇಸ್ಟ್ರು, ಪರಶುರಾಮ ಮಟ್ಟೇರ, ಎಂ. ನವೀನ್ ಕುಮಾರ್, ಬಾಲರಾಜ್, ಸೋಮಿನಕಟ್ಟಿ, ಶ್ರೀನಿವಾಸ ನಗಲಾಪುರ, ರಾಮಪ್ಪಗೌಡರು ಭಾಗವಹಿಸಿ ವಿವಿಧ ಕಾರ್ಯಕ್ರಮ

ತುಳಸಿ ಸಂಗಡಿಗರು ಪ್ರಾರ್ಥಿಸಿದರು. ಕಜಾಪ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ಸ್ವಾಗತಿಸಿ, ಸಾಹಿತ್ಯ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಮಂಜಪ್ಪ ನಿರೂಪಿಸಿ, ಕಜಾಪ ಜಿಲ್ಲಾ ಉಪಾಧ್ಯಕ್ಷರಾದ ಧರ್ಮೋಜಿರಾವ್ ವಂದಿಸಿದರು.
ಜನಪದ ಗೀತೆಗಳು ವಿಶಾಲಾಕ್ಷಮ್ಮ ಮತ್ತು ತಂಡ ಸೋಬಾನೆ ಹಾಡಿದರು. ಗಿರಿಜಮ್ಮ ಮತ್ತು ತಂಡ ಸೋಬಾನೆ ಹಾಡಿದರು
ಶೋಭಾ ಅವರು ಜೋಗುಳ, ತಾಯಿ ಹಾಡು ಹಾಡಿದರು. ಹೇಮಾ, ಮಮತ ಅವರು ಜನಪದ ಹಾಡು ಹಾಡಿದರು.
ಜನಪದ ಆಟಗಳಲ್ಲಿ ಗೆದ್ದವರು:
ಗೋಲಿ ಆಟದಲ್ಲಿ ಹೃತಿಕ್ ಪ್ರಥಮ, ತರುಣ್ ದ್ವಿತೀಯ, ಭಾಗೇಶ್ ತೃತೀಯ, ಗೋಲಿ ಪುರುಷರು ಗಣೇಶ್ ಪ್ರಥಮ, ಮಲ್ಲೇಶ್ ದ್ವಿತೀಯ ಬಹುಮಾನ ಪಡೆದರು.
ಬುಗುರಿ : ಸಚಿನ್ ಪ್ರಥಮ, ಕರುಣ್ ದ್ವಿತೀಯ, ನಿಶಾಂತ್ ತೃತೀಯ,
ಬುಗುರಿ ಪುರುಷರು : ಗಣೇಶ್ ಪ್ರಥಮ, ಮಲ್ಲೇಶ್ ದ್ವಿತೀಯ, ವಿಠಲ ತೃತೀಯ
ಹಗ್ಗ ಜಿಗಿತ ವಿದ್ಯಾರ್ಥಿಗಳು : ಸಂಗೀತ ಪ್ರಥಮ, ನೇತ್ರ ದ್ವಿತೀಯ, ಸಾವಿತ್ರಿ ತೃತೀಯ
ಮಹಿಳೆಯರ ವಿಭಾಗದಲ್ಲಿ : ಸಂಜನ ವಿ ಪ್ರಥಮ, ರೇಖಾ ದ್ವಿತೀಯ, ಮಮತಾ ತೃತೀಯ
ಹಗ್ಗ ಜಗ್ಗಾಟ ಮಹಿಳೆಯರು : ತುಂಗಾ, ಜ್ಯೋತಿ ತಂಡ ಪ್ರಥಮ, ವರದಾ ಮತ್ತು ಗೀತಾ ತಂಡ ದ್ವಿತೀಯ
ಪುರುಷರ ವಿಭಾಗ : ಪ್ರದೀಪ್ ತಂಡ ಪ್ರಥಮ, ಕೃಷ್ಣಮೂರ್ತಿ ದ್ವಿತೀಯ
ಮಡಕೆ ಒಡೆಯುವ ಸ್ಪರ್ಧೆ: ಮಹಿಳೆಯರು : ಸುಶೀಲಾ ಪ್ರಥಮ, ಸೌಮ್ಯ ದ್ವಿತೀಯ, ರಾಜೇಶ್ವರಿ ತೃತೀಯ.
ಪುರುಷರ ವಿಭಾಗ : ಪ್ರಜ್ವಲ್ ಪ್ರಥಮ, ವಿಠಲ ದ್ವಿತೀಯ, ಕೃಷ್ಣಮೂರ್ತಿ ತೃತೀಯ ಬಹುಮಾನ ಪಡೆದರು.
ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಣೆ ಮಾಡಲಾಯಿತು