ಶಿವಮೊಗ್ಗ: ನ.15 ಕಾಂಗ್ರೆಸ್ ನಾಯಕರು ಹಾಗೂ ರ‍್ಕಾರದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುಮೊಟೊ(ಸ್ವಯಂ ಪ್ರೇರಿತ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿನಾAಕ:-14-11-2024 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದುರಾರ ಇನ್ ಸೆಕ್ಟರ್ ಸಿದ್ದೇಗೌಡ ಹೆಚ್.ಎಂ. ನೀಡಿದ ದೂರಿನ ಸಾರಾಂಶವೆನೆAದರೆ ನ.13 ರಂದು ಶಿವಮೊಗ್ಗ ಪತ್ರಿಕಾ ಭವನದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರ ಭಕ್ತ ಬಳಗದ ಸಂಚಾಲಕರಾದ ಕೆ,ಎಸ್ ಈಶ್ವರಪ್ಪ ಪತ್ರಿಕಾ ಗೋಷ್ಟಿ ನಡೆಸಿದ್ದು ಪತ್ರಿಕಾಗೋಷ್ಟಿ ಸಮಯದಲ್ಲಿ ಅವರು ವಕ್ಸ್ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ

ಮುಸಲ್ಮಾನರು ಮಾಡುವ ಅಚಾತುರ್ಯಗಳನ್ನೆಲ್ಲಾ ಗಮನಿಸಿದರೂ ಕೂಡ ಕಾಂಗ್ರೇಸ್ ಸರ್ಕಾರ ಸುಮ್ಮನಿದೆ ರೈತ ಭೂಮಿ, ದೇವಸ್ಥಾನ ಮಠಗಳು ಇಷ್ಟೇಕೆ ಶಾಲಾ ಕಾಲೇಜುಗಳು ಪುರಾತತ್ವ ಇಲಾಖೆಯ ಪ್ರದೇಶಗಳನ್ನೂ ಕೂಡ ವಕ್ಸ್ ಆಸ್ತಿ ಎಂದು ಬದಲಾಯಿಸಲಾಗಿದೆ ಎಂದು ಹೇಳಿದ್ದರು.

ವಿಶ್ವೇಶ್ವರಯ್ಯ ನವರು ಹುಟ್ಟಿದ ಗ್ರಾಮವನ್ನೂ ಇವರು ಬಿಟ್ಟಿಲ್ಲ ಮತ್ತೊಂದು ಕಡೆ ಇನ್ನೊಬ್ಬ ಮುಸ್ಲಿಂ ನಾಯಕ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡಿದ್ದಾನೆ. ಅಂಬೇಡ್ಕರ್ ಅವರು ಇಸ್ಲಾಂಧರ್ಮ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ

ಅವಮಾನ ಮಾಡಿದ್ದಾರೆ ಹೀಗೆ ಅವಮಾನ ಮಾಡಿದ್ದರೂ ಕಾಗ್ರೇಸ್‌ನ ಒಬ್ಬ ನಾಯಕನೂ ಕೂಡ ಏಕೆಂದು ಪ್ರಶ್ನೆ ಮಾಡಲಿಲ್ಲ. ಇಸ್ಲಾಮೀಕರಣಕ್ಕೆ ಕಾಂಗ್ರೇಸ್ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ ಇದೀಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂರಿಗೆ ಶೇಕಡಾ 4 ರಷ್ಟು ಮಿಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದರು.

 ಇವರೇನು ಹಿಂದು ಸ್ಥಾನವನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರೆ. ಇದು ಹೀಗೇ ಮುಂದುವರೆದರೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುವ ಕಾಲ ದೂರವಿಲ್ಲ ಕಾಂಗ್ರೇಸಿಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ ಅಂತ ಇತ್ಯಾದಿಯಾಗಿ ಮಾತನಾಡಿರುವುದು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿರುತ್ತದೆ. ಕೆ.ಎಸ್ ಈಶ್ವರಪ್ಪರವರು ಪತ್ರಿಕಾಗೋಷ್ಟಿ

ಸಮಯದಲ್ಲಿ ಅನ್ಯ ಕೋಮಿನ ವಿರುದ್ಧದ್ವೇಷ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಸೌಹರ್ದತೆಯನ್ನು ಹೆಚ್ಚಿಸುವ ರೀತಿಯಲ್ಲಿ ಅನ್ಯ ಕೋಮಿಗೆ ಹಾಗೂ ಅನ್ಯ ಪಕ್ಷಕ್ಕೆ ಉದ್ರೇಕ ಉಂಟಾಗುವAತೆ ಪ್ರಚೋದನಕಾರಿಯಾಗಿ ಮಾತನಾಡಿರುತ್ತಾರೆ. ಈ ರೀತಿ ಪ್ರಚೋದನಕಾರಿ ಮಾತನಾಡಿರುವ ಕೆ.ಎಸ್.ಈಶ್ವರಪ್ಪರವರ ಮೇಲೆ ಕಾನೂನು ಕ್ರಮಕೈಗೊಳ್ಳಲು ನೀಡಿದದೂರಿನ ಮೇರೆಗೆ ಸುಮೊಟೊ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

By admin

ನಿಮ್ಮದೊಂದು ಉತ್ತರ

You missed

error: Content is protected !!