ಸಾಗರ : ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು, ತಮ್ಮ ಲಾಭಕ್ಕಾಗಿ ಎಚ್.ಐ.ವಿ.ಯಂತಹದ್ದನ್ನು ಇಂಜೆಕ್ಟ್ ಮಾಡುವವರಿಗೆ ನೇಣುಗಂಭಕ್ಕೆ ಹಾಕಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಕ್ರೋಶದ ಮಾತುಗಳನ್ನಾಡಿದ್ದಾರೆ.


ರ ಪತ್ರಕರ್ತರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಹನಿಟ್ರಾಪ್, ಮನಿಟ್ರಾಪ್ ಜಾಸ್ತಿಯಾಗುತ್ತಿದೆ. ಹಿಂದಿನಿಂದಲೂ ಇದು ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.


ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚುತ್ತಿದೆ. ಜನಪ್ರತಿನಿಧಿಯಾದವರು ಹೆಚ್ಚು ಜಾಗೃತೆಯಿಂದ ಇರಬೇಕು. ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಸಿಲುಕಬಾರದು. ಜನ ನಮ್ಮನ್ನು ಗಮನಿಸುತ್ತಾ ಇರುತ್ತಾರೆ ಎನ್ನುವ ಪ್ರಜ್ಞೆ ಇರಬೇಕು ಎಂದರು.


ಮುನಿರತ್ನ ಅವರ ವಿರುದ್ದ ಕೇಳಿ ಬಂದಿರುವ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆದು ಬಂಧನಕ್ಕೆ ಒಳಗಾಗಿದ್ದಾರೆ.

ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾತ್ರ ಇದರಲ್ಲಿ ಇಲ್ಲ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸಹ ಇಂತಹ ಘಟನೆ

ನಡೆದಿದೆ. ಅನಗತ್ಯವಾಗಿ ಉಪ ಮುಖ್ಯಮಂತ್ರಿಗಳ ಮೇಲೆ ಗೂಬೆ ಕೂರಿಸಬೇಡಿ. ಮುನಿರತ್ನ ವಿರುದ್ದ ಬೇರೆಬೇರೆ ಪ್ರಕರಣ ದಾಖಲಾಗುತ್ತಿದೆ. ರಾಜ್ಯ ಸರ್ಕಾರ ಕಾನೂನಿಗೆ ಪೂರಕವಾಗಿ ಕೆಲಸ ಮಾಡುವುದು ಅನಿವಾರ್ಯ ಎಂದರು.

By admin

ನಿಮ್ಮದೊಂದು ಉತ್ತರ

You missed

error: Content is protected !!