ಶಿವಮೊಗ್ಗ,ಸೆ.೧೪: ಹಿಂದೂ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆ ಮಂಗಳವಾರ ಅದ್ಧೂರಿಯಾಗಿ ನಡೆಯಲಿದ್ದು, ಪ್ರತಿವರ್ಷದಂತೆ ಈ ಬಾರಿ ಕೂಡ ನಗರವನ್ನು ಕೇಸರಿ ಬಾವುಟಗಳಿಂದ ಸಿಂಗರಿಸಲಾಗಿದೆ.

ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಮೆರವಣಿಗೆಯ ಯಶಸ್ಸಿಗೆ ಬಿಗಿಭದ್ರತಾ ಕ್ರಮ ಕೈಗೊಂಡಿದ್ದು,

ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ. ಹಿಂದೂಪರ ಸಂಘಟನೆಗಳು ಅಲ್ಲಲ್ಲಿ ವಿಶೇಷ ಅಲಂಕಾರ ಮಾಡಿದ್ದು, ನಗರವೆಲ್ಲಾ ವಿದ್ಯುತ್ ದೀಪಾಲಂಕೃತಗೊಂಡಿದೆ.

ನಗರದ ಗಾಂಧಿಬಜಾರ್ ಮುಖ್ಯ ದ್ವಾರದಲ್ಲಿ ಈ ಬಾರಿ ಕಾಶಿ ವಿಶ್ವನಾಥ ದೇಗುಲದ ಪ್ರತಿಕೃತಿಯನ್ನು ಮಾಡಿದ್ದು, ಆಕರ್ಷಣಿಯವಾಗಿದೆ.

ನಗರದ ಅಮೀರ್ಅಹಮ್ಮದ್ ವೃತ್ತದಲ್ಲಿಯೂ ಕೂಡ ರಾಮನು ಆಂಜನೇಯನಿಗೆ ಬಾಚಿ ತಬ್ಬಿಕೊಂಡ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತಿದ್ದು, ಈ ಬಾರಿಯ ಮೆರವಣಿಗೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ರಾತ್ರಿ ೮ ಕ್ಕೆ ಮಹಾಮಂಗಳರಾತಿ ನಡೆಯಲಿದ್ದು, ಮಂಗಳವಾರ ಬೆಳಿಗ್ಗೆ ೯.೩೦ಕ್ಕೆ ಮೆರವಣಿಗೆ ಆರಂಭವಾಗಲಿದೆ.