
ಶಿವಮೊಗ್ಗ, ಸೆ.14: ನೆಹರು ಕ್ರೀಡಾಂಗಣದಲ್ಲಿ ನಡೆಸಲಾದ,ಶಾಲಾ ಶಿಕ್ಷಣ ಇಲಾಖೆಯ ಸಹ ಯೋಗದಲ್ಲಿ ಆಯೋಜಿಸಲಾಗಿದ್ದ ಬಾಲಕ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳ ‘ಬಿ’ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬಾಲಕ ಮತ್ತು

ಬಾಲಕಿಯರು ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ, ಕಬಡ್ಡಿ, ಖೋ ಖೋ ದಲ್ಲಿ ಬಾಲಕ ಬಾಲಕಿಯರು ಉತ್ತಮ ಸಾಧನೆ ಮಾಡಿ ತಾಲೂಕು ಹಂತದ ಕ್ರೀಡೆಗೆ ಆಯ್ಕೆಯಾಗಿದ್ದಾರೆ.

ಅದೇ ರೀತಿ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಡಿಗೆ ಸ್ಪರ್ಧೆ, 4×100 ಮೀ ರಿಲೇ , 4×400 ಮೀ ರಿಲೇ,100ಮೀ, 200ಮೀ, 800ಮೀ, ತಟ್ಟೆ ಎಸೆತ,ಜಾವೆಲಿನ್ ಎಸೆತ , ಎತ್ತರ ಜಿಗಿತ, ಗುಂಡು ಎಸೆತ, ಪೋಲೊ ವ್ಯಾಟ್, ಇನ್ನೂ ಮುಂತಾದ ವಯುಕ್ತಿಕ ಸ್ಪರ್ಧೆಗಳಲ್ಲಿ, ಹಾಗೂ ಹಲವು

ಗುಂಪು ಆಟಗಳಲ್ಲಿ ಉತ್ತಮ ಸಾಧನೆಯೊಂದಿಗೆ,ಸಮಗ್ರ ಪ್ರಶಸ್ತಿ ಹಾಗೂ ಟ್ರೋಪಿಯನ್ನು ಸಂಸ್ಥೆಯ ಮಡಿಲಿಗೆ ಹಾಗೂ ತಮ್ಮಡಿ ಹಳ್ಳಿ ಗ್ರಾಮಕ್ಕೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ.
ಈ ಕ್ರೀಡಾ ಪ್ರತಿಭೆಗಳ ಮುಂದಿನ ಕ್ರೀಡಾ ಜೀವನ ಯಶಸ್ವಿ ಯಾಗಲೆಂದು ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಎಸ್. ಕಾಳನಾಯ್ಕ ಹಾಗೂ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಅಕ್ಕ ಪಕ್ಕದ ಊರಿನ ಪೋಷಕ ವರ್ಗದವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.